Attention Please | ಬಾಲಕಿ ಕಾವ್ಯಾಳ ಕಣ್ಣೀರೊರೆಸಿ ಮುಖದಲ್ಲಿ ನಗುವರಳಿಸಲು ಜೊತೆಯಾಗುವಿರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಗಲ ಮೇಲೆ ಪುಸ್ತಕಗಳ ಮೂಟೆ ಹೊತ್ತುಕೊಂಡು ಸಹಪಾಠಿಗಳೊಂದಿಗೆ ಹರಟೆ ಹೊಡೆಯುತ್ತಾ ಶಾಲೆಯತ್ತ ಹೆಜ್ಜೆ ಹಾಕಿ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯ ಜೊತೆಗೆ ಪಾಠಕ್ಕೆ ಕಿವಿಯಾಗಿ ಸಂತಸದ ಕ್ಷಣವನ್ನು ಕಳೆಯಬೇಕಾದ 14ರ ಜರೆಯದ ಅಪ್ರಾಪ್ತ ಬಾಲಕಿ ಸಹಿತ ಆಕೆಯ ಮನೆಮಂದಿ ದುಃಖದ ಕಣ್ಣೀರಲ್ಲಿ ಕಾಲಕಳೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗಡಿಯಾರ ಗ್ರಾಮದ ಪೇರಮೊಗರು ನಿವಾಸಿ ರಮೇಶ ದಂಪತಿಯ ಪುತ್ರಿ. ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿರುವ ಕಾವ್ಯಾ ಅಪರೂಪದ ಎಸ್.ಎಲ್.ಇ. ಡಿಸೀಸ್ ಎಂಬ ಮಾರಕ ರೋಗಕ್ಕೆ ತುತ್ತಾಗಿ, ಲವಲವಿಕೆಯಿಂದ ಕುಣಿದು ಕುಪ್ಪಳಿಸಬೇಕಾದ ಬಾಲಕಿ ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾಳೆ.

ಬಡತನದಲ್ಲಿಯೇ ಸಾಗುತ್ತಿದೆ ಬದುಕು
ಬಾಲಕಿಯ ಪೋಷಕರು ಆರ್ಥಿಕವಾಗಿ ತೀರಾ ಬಡವರಾಗಿದ್ದು, ಮಗಳ ಜೀವ ಉಳಿಸುವ ನಿಟ್ಟಿನಲ್ಲಿ ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ, ಇದೀಗ ಒಂದೊತ್ತಿನ ಊಟಕ್ಕೆ ಕಷ್ಟದ ಸ್ಥಿತಿಯಲ್ಲಿರುವ ಮನೆ ಮಂದಿ ತನ್ನ ಪುತ್ರಿಯ ಜೀವ ಉಳಿಸುವ ನಿಟ್ಟಿನಲ್ಲಿ ದಾನಿಗಳಿಂದ ಆರ್ಥಿಕ ನೆರವನ್ನು ಯಾಚಿಸುತ್ತಿದೆ.

ಚಿಕಿತ್ಸೆಗೆ 20 ಲಕ್ಷ ರೂ. ಅಗತ್ಯವಿದೆ 
ಕಾವ್ಯಾಳ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿ ಈ ಹಿಂದಿನಂತೆ ಓಡಾಡಲು ಚಿಕಿತ್ಸೆಗೆ ಇನ್ನು ಕೂಡ 20 ಲಕ್ಷ ರೂ.ವಿನ ಆವಶ್ಯಕತೆ ಇದೆ ಎಂದು ಆಕೆಯನ್ನು ಪರೀಕ್ಷಿಸುತ್ತಿರುವ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾಗಿರುವ ಬಾಲಕಿಯ ಹೆತ್ತವರು, ಕುಟುಂಬಸ್ಥರು ಮಾತ್ರವಲ್ಲ. ಗಡಿಯಾರು ಗ್ರಾಮದ ಸರ್ವರು ಜಾತಿ, ಮತ ಬೇಧ ಮರೆತು ಕಾವ್ಯಾಳ ಈ ಅಪರೂಪದ ಕಾಯಿಲೆ ಸಂಪೂರ್ಣ ವಾಸಿಯಾಗಿ ಜೀವ ಉಳಿಸುವ ನಿಟ್ಟಿನಲ್ಲಿ ದಾನಿಗಳಿಂದ ಸಹಾಯಹಸ್ತವನ್ನು ಯಾಚಿಸುತ್ತಿದ್ದಾರೆ.

ಬಾಲಕಿ ಕಾವ್ಯಾಳ ಜೀವ ಉಳಿಸುವ ನಿಟ್ಟಿನಲ್ಲಿ ಧನ ಸಹಾಯದ ಮೂಲಕ ಸಹಕರಿಸುವವರು ಈ ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಹಿಸಬಹುದು.

ಗೂಗುಲ್ ಪೇ / ಫೋನ್ ಪೇ ನಂಬರ್
70906 92408
ಶ್ರೀಮತಿ ನಳಿನಿ,
ಫೆಡರಲ್ ಬ್ಯಾಂಕ್ ,
ಪುತ್ತೂರು ಶಾಖೆ, ಖಾತೆ ನಂಬರ್:
18940100056735
IFSC ನಂಬರ್: FDRL0001894

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!