ಹೊಸ ದಿಗಂತ ಡಿಜಿಟಲ್ ಡೆಸ್ಕ್
ದೇಶದಲ್ಲಿ ಆಧಾರ್ ಜೊತೇಗಿನ ಪಾನ್ ಕಾರ್ಡ್ ಜೋಡಣೆ ಮಾಡಲು ಮಾರ್ಚ್ 2023 ರ ವರೆಗೆ ಅವಕಾಶವಿದ್ದು, ಆ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈ ಕುರಿತು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದ್ದು, ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಇಂದೇ ಜೋಡಣೆ ಮಾಡಿ ಎಂದು ಪ್ರಕಟಿಸಿದೆ.
ಎಲ್ಲಾ ಪ್ಯಾನ್ ಕಾರ್ಡ್ ಹೋಲ್ಡರ್ ಗಳು 31.03,2023 ರ ವೇಳೆಗೆ ಆಧಾರ್ ಗೆ ಜೋಡಣೆ ಮಾಡುವುದು ಅಗತ್ಯವಾಗಿದೆ ಇಲ್ಲದೇ ಇದ್ದಲ್ಲಿ ಪ್ಯಾನ್ ನಿಷ್ಕ್ರಿಯಗೊಳಿಸುತ್ತದೆ ಎಂದು ಇಲಾಖೆ ತಿಳಿಸಿದೆ.
2017 ರಲ್ಲಿ ಸರ್ಕಾರದ ಅಧಿಸೂಚನೆಯ ಪ್ರಕಾರ, ಅಸ್ಸಾಂ, ಜಮ್ಮು-ಕಾಶ್ಮೀರ, ಮೇಘಾಲಯದ ಮಂದಿ ವಿನಾಯಿತಿ ವಿಭಾಗದಲ್ಲಿ ಬರುತ್ತಾರೆ, ಹಾಗೂ 80 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ವಿನಾಯ್ತಿ ನೀಡಲಾಗುತ್ತದೆ.