2ನೇ ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ 405 ರನ್‌: ಬುಮ್ರಾಗೆ 5 ವಿಕೆಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ಇಂದು 101 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 405 ರನ್‌ಗಳಿಸಿದೆ.

ಸ್ವೀವ್‌ ಸ್ಮಿತ್‌ 101 ರನ್‌ (190 ಎಸೆತ, 12 ಬೌಂಡರಿ), ಟ್ರಾವಿಸ್‌ ಹೆಡ್‌ 152 ರನ್‌( 160 ಎಸೆತ, 18 ಬೌಂಡರಿ) ಹೊಡೆದರು. ದಿನದ ಅಂತ್ಯಕ್ಕೆ ಅಲೆಕ್ಸ್‌ ಕ್ಯಾರಿ 45 ರನ್‌, ಮಿಶೆಲ್‌ ಸ್ಟ್ರಾಕ್‌ 7 ರನ್‌ ಹೊಡೆದು ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ (WTC) 5 ವಿಕೆಟ್‌ ಪಡೆದ ಆಸ್ಟ್ರೇಲಿಯಾ ಪ್ಯಾಟ್‌ ಕಮ್ಮಿನ್ಸ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬುಮ್ರಾ 5 ವಿಕೆಟ್‌ ಪಡೆದರೆ ಸಿರಾಜ್‌ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ತಲಾ ಒಂದೊಂದು ವಿಕೆಟ್‌ ಪಡೆದರು.

ಮಳೆಯಿಂದಾಗಿ ಮೊದಲ ದಿನ ರದ್ದಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here