ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ವರ್ಷಗಳಿಂದ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದ ಆಸ್ಟ್ರೇಲಿಯಾ ಫೆಬ್ರವರಿ ಕೊನೆ ವಾರದಲ್ಲಿ ವಿದೇಶಿ ಪ್ರವಾಸಿಗರಿಗೆ ತನ್ನ ಗಡಿ ತೆರೆಯಲು ತೀರ್ಮಾನಿಸಿದೆ.
ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಬಳಿಕ ಈ ತೀರ್ಮಾನ ಕೈಗೊಂಡಿರುವ ಆಸ್ಟ್ರೇಲಿಯಾ ಸರ್ಕಾರ ಶೀಘ್ರದಲ್ಲಿ ವಿದೇಶಿ ಪ್ರವಾಸಿಗರಿಗೆ ಗಡಿತೆರೆಯಲು ಸರ್ಕಾರ ಯೋಜಿಸಲಾಗಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಕರೆನ್ ಆಂಡ್ರಯೋಸ್, ನಾವು ಆದಷ್ಟು ಬೇಗ ಗಡಿ ತೆರೆಯಲು ಸಿದ್ಧವಾಗಿದ್ದೇವೆ. ಅದಕ್ಕೆ ಅಗತ್ಯ ಮಾಹಿತಿಯನ್ನು ನಾಪು ಸಂಗ್ರಹಿಸುತ್ತಿದ್ದೇವೆ ಎಂದರು.
ಆಸ್ಟ್ರೇಲಿಯಾದ ಪ್ರವಾಸೋದ್ಯಮಕ್ಕೆ ವಿಶ್ವದೆಲೆಡೆ ಬೇಡಿಕೆ ಇದ್ದು, ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸೋದ್ಯಮ ವಾರ್ಷಿಕ 84.9 ಶತಕೋಟಿ ಡಾಲರ್ ಆದಾಯ ಗಳಿಸುತ್ತಿತ್ತು. ಆದರೆ ಲಾಕ್ ಡೌನ್ ನಿಂದ ವಾರ್ಷಿಕ ಲಾಭ ಶೇ.47ರಷ್ಟು ಇಳಿಕೆಯಾಗಿದೆ.