ಹೊಸದಿಗಂತ ಡಿಜಿಟಲ್ ಡೆಸ್ಕ್:
2023–25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ಗಾಗಿ ಕ್ರಿಕೆಟ್ ಪ್ರಿಯರು ಮತ್ತೊಮ್ಮೆ ರೋಚಕ ಕದನಕ್ಕೆ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ಜೂನ್ 11 ರಿಂದ 15 ರವರೆಗೆ ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಇದು ದಕ್ಷಿಣ ಆಫ್ರಿಕಾ ತಂಡದ ಮೊದಲ ಫೈನಲ್ ಪಂದ್ಯ. ಭಾರತ ಇಲ್ಲದ ಮೊದಲ WTC ಫೈನಲ್ ಎಂಬ ವಿಶೇಷತೆಯನ್ನು ಈ ಬಾರಿ ಹೊಂದಿದೆ.
ಇದುವರೆಗೆ ಐಸಿಸಿ ಟೂರ್ನಿಯಲ್ಲಿ ಗೆಲುವು ದಾಖಲಿಸದ ದಕ್ಷಿಣ ಆಫ್ರಿಕಾ, ಈ ಬಾರಿ ಚಾಂಪಿಯನ್ ಆಗಬಹುದೆಂಬ ನಿರೀಕ್ಷೆ ಮೂಡಿದೆ. ಆಸ್ಟ್ರೇಲಿಯಾ 2021-23ರ WTC ಫೈನಲ್ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇದೀಗ ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ ತಂಡದ ನಾಯಕ) ನೇತೃತ್ವದ ತಂಡ ಮತ್ತೊಮ್ಮೆ ಗೆದ್ದು ಬೀಗಲಿದೆಯೇ ಎಂದು ಕಾದು ನೋಡಬೇಕಿದೆ.
ಪ್ರಸಾರ ಮಾಹಿತಿ:
WTC ಫೈನಲ್ ಅನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗಳಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಒಟಿಟಿ ಪ್ರೇಕ್ಷಕರು ಜಿಯೋ ಸಿನಿಮಾ ಅಥವಾ ಹಾಟ್ಸ್ಟಾರ್ನಲ್ಲಿ ಲೈವ್ ವೀಕ್ಷಿಸಬಹುದು. ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.