ಹೊಸದಿಗಂತ ಡಿಜಿಟಲ್ ಡೆಸ್ಕ್
ಅಡಿಲೇಡ್ ಓವೆಲ್ ನಲ್ಲಿ ನಡೆದ 2 ನೇ ಹಾಗೂ ಹಗಲು-ರಾತ್ರಿ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 77 ರನ್ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ 419 ರನ್ಗಳ ಬೃಹತ್ ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಆಸಿಸ್ 511 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪ್ರತ್ಯುತ್ತರವಾಗಿ ಬ್ಯಾಟಿಂಗ್ ಗೆ ಇಳಿದ ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 214 ರನ್ಗಳನ್ನಷ್ಟೇ ಗಳಿಸುವಲ್ಲಿ ಶಕ್ತವಾಗಿತ್ತು. ಆಸ್ಟ್ರೇಲಿಯ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 199-6 ಡಿಕ್ಲೇರ್ ಮಾಡಿ ಕೆರಿಬಿಯನ್ ತಂಡಕ್ಕೆ ಗೆಲ್ಲಲು 497 ರನ್ಗಳ ಗುರಿ ನೀಡಿತ್ತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಾರಕ ದಾಳಿನಡೆಸಿದ ಆಸಿಸ್ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಮೈಕೆಲ್ ನಾಸರ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ ಮೂರು ವಿಕೆಟ್ ಪಡೆದು ಕೆರಿಬಿಯನ್ ಪಡೆಯನ್ನು ಕೇವಲ 77 ರನ್ಗಳಿಗೆ ಕಟ್ಟಿಹಾಕಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ