ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ಬ್ರಿಟೀಷ್ ವಸಾಹತುವಾಗಿದ್ದ ಆಸ್ಟ್ರೇಲಿಯಾ ಸ್ವತಂತ್ರ ದೇಶವಾದ ನಂತರವೂ ತನ್ನ ನೋಟುಗಳಲ್ಲಿ ಬ್ರಿಟೀಷ್ ರಾಜನ ಚಿತ್ರಗಳನ್ನು ಇರಿಸಿಕೊಂಡಿತ್ತು. ಆದರೀಗ ಆ ಚಿತ್ರಗಳನ್ನು ತೆಗೆದುಹಾಕುವುದಾಗಿ ಆಸ್ಟ್ರೇಲಿಯಾ ಹೇಳಿದೆ. ರಾಣಿ ಎಲಿಜಬೇತ್ ಚಿತ್ರವನ್ನು ತೆಗೆದು ಸ್ಥಳೀಯ ವಿನ್ಯಾಸದ ಚಿತ್ರದೊಂದಿಗೆ ಮುದ್ರಿಸುವುದಾಗಿ ಹೇಳಿದೆ.
ಮೊದಲ ಆಸ್ಟ್ರೇಲಿಯನ್ನರ ಸಂಸ್ಕೃತಿ ಮತ್ತು ಇತಿಹಾಸವನ್ನು ಗೌರವಿಸುವ ಹೊಸ ವಿನ್ಯಾಸದ ಕುರಿತು ಸ್ಥಳೀಯ ಜನರೊಂದಿಗೆ ಸಮಾಲೋಚನೆ ನಡೆಸುವುದಾಗಿ ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಹೇಳಿದೆ. ಇಲ್ಲಿಯವರೆಗೆ ಬ್ರಿಟೀಶ್ ಸಾಮ್ರಾಜ್ಯದ ರಾಜ ಚಾರ್ಲ್ಸ್ III ಚಿತ್ರಗಳು ಆಸ್ಟ್ರೇಲಿಯಾದ ನೋಟುಗಳ ಮೇಲೆ ಮುದ್ರಿಸಲಾಗುತ್ತಿತ್ತು. ಈಗ ಚಾರ್ಲ್ಸ್ III ಮತ್ತು ರಾಣಿ ಎಲಿಜಬೇತ್ II ರ ಚಿತ್ರವನ್ನು ತೆಗೆದು ಅದರ ಮೇಲೆ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಚಿತ್ರ ಮುದ್ರಿಸುವುದಾಗಿ ಹೇಳಿದೆ.
ಕಳೆದ ವರ್ಷ ಸೆಪ್ಟೆಂಬರ್ 8 ರಂದು ರಾಣಿ ಎಲಿಜಬೆತ್ ಅವರ ಮರಣವು ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕ ಶೋಕದಿಂದ ಗುರುತಿಸಲ್ಪಟ್ಟಿತು, ಆದರೆ ಕೆಲವು ಸ್ಥಳೀಯ ಗುಂಪುಗಳು ಆ ಸಮಯದಲ್ಲಿ ವಸಾಹತುಶಾಹಿ ಬ್ರಿಟನ್‌ನ ವಿನಾಶಕಾರಿ ಪರಿಣಾಮವನ್ನು ಪ್ರತಿಭಟಿಸಿ, ರಾಜಪ್ರಭುತ್ವದ ನಿರ್ಮೂಲನೆಗೆ ಕರೆ ನೀಡಿದ್ದರು. ಪ್ರಸ್ತುತ ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕಿನ ಈ ನಿರ್ಧಾರವನ್ನು ಅಲ್ಲಿನ ಆಡಳಿತಾರೂಢ ಸರ್ಕಾರ ಬೆಂಬಲಿಸಿದೆ ಎಂದು ಬ್ಯಾಂಕ್ ಹೇಳಿದೆ.