ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಗ್ರಿ ಓದಿ ಆಟೋ ಓಡಿಸಿ ಜೀವನ ಮಾಡೋರು ಇದ್ದಾರೆ, ಆದರೆ ಹೆಚ್ಚಿನ ಪಕ್ಷ ಇಂಗ್ಲಿಷ್ ಹಾಗೂ ಹಿಂದಿ ಬಾರದ ಚಾಲಕರು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರಿಗೆ ಬಂದಮೇಲೆ ಸ್ವಲ್ಪವೂ ಕನ್ನಡ ಗೊತ್ತಿಲ್ಲದೇ ಹೋದ್ರೆ ಹೇಗೆ? ಅದ್ರಲ್ಲೂ ಆಟೋ, ಬಸ್, ಕ್ಯಾಬ್, ಹೊಟೇಲ್‌ಗಳಲ್ಲಿ ಕಮ್ಯುನಿಕೇಟ್ ಮಾಡೋದಕ್ಕೆ ಮಿನಿಮಮ್ ಕನ್ನಡ ಆದ್ರೂ ಬರಲೇಬೇಕು. ಇಂಥವರಿಗಾಗಿ ಆಟೋ ಡ್ರೈವರ್ ಒಬ್ಬರು ಸಿಂಪಲ್ ಆದ ಗೈಡ್‌ಲೈನ್ಸ್‌ನ್ನು ತಮ್ಮ ಆಟೋದಲ್ಲಿ ಅಂಟಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಸಿಂಪಲ್ ಆದ, ನಮಸ್ಕಾರ, ಮುಂದೆ ಹೋಗಿ ರೈಟ್/ಲೆಫ್ಟ್, ನಾನು ಕನ್ನಡ ಕಲಿತಾ ಇದಿನಿ ಈ ರೀತಿ ಸಿಂಪಲ್ ವಿಷಯಗಳ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಇದೆ. ಆಟೋ ಡ್ರೈವರ್ ನಡೆಗೆ ಕನ್ನಡಿಗರು ನಿಮ್ದೇ ಹವಾ ಎಂದು ಖುಷಿಪಟ್ಟು ಹೇಳ್ತಿದ್ದಾರೆ.