ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದಾಗಿ ಅಲ್ಲಿ ಸಿಲುಕಿದ್ದ ವೃದ್ಧ ಪ್ರವಾಸಿಗರ ಗುಂಪೊಂದನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈಶಾನ್ಯ ರಾಜ್ಯದ ತವಾಂಗ್, ಪಶ್ಚಿಮ ಕಾಮೆಂಗ್, ಶಿ-ಯೋಮಿ ಮತ್ತು ಅಪ್ಪರ್ ಸುಬನ್ಸಿರಿಯ ಕೆಲವು ಭಾಗಗಳಲ್ಲಿ ಹಠಾತ್ ಚಳಿಯ ಪರಿಣಾಮ ಹೊಸ ಹಿಮ ಬಿದ್ದಿದ್ದು, ಈ ಋತುವಿನಲ್ಲಿ ಇದೇ ಮೊದಲ ಬಾರಿಯಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ಎಂಟು ಪ್ರವಾಸಿಗರ ಗುಂಪು ಪಶ್ಚಿಮ ಕಾಮೆಂಗ್ ಜಿಲ್ಲೆಯ ಬೊಮ್ಡಿಲಾಗೆ ಹೋಗುತ್ತಿದ್ದಾಗ, ಅವರ ವಾಹನವು ಹಠಾತ್ ಹವಾಮಾನ ಬದಲಾವಣೆಗೆ ಒಳಗಾಗಿ ಓಲ್ಡ್ ಸೆಲಾ ಮಾರ್ಗದ ಹಿಮಭರಿತ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು.

