Avocado | ‘ಬೆಣ್ಣೆ ಹಣ್ಣು’ ತಿನ್ನೋದ್ರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆ! ನೀವು ತಿನ್ನೋಕೆ ಶುರು ಮಾಡಿ

 

ಬಟರ್ ಫ್ರೂಟ್ (ಆವಕಾಡೊ) ಅಥವಾ ಕನ್ನಡದಲ್ಲಿ ಬೆಣ್ಣೆ ಹಣ್ಣು, ಅಲ್ಪ ಪ್ರಮಾಣದಲ್ಲೇ ಅನೇಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ಆರೋಗ್ಯ ತಜ್ಞರು ಶ್ಲಾಘಿಸುತ್ತಾರೆ. ಬೆಲೆ ಸ್ವಲ್ಪ ಹೆಚ್ಚು ಇದ್ದರೂ, ಇದರ ಪೋಷಕಮೌಲ್ಯ ಹಾಗೂ ಆರೋಗ್ಯ ಲಾಭಗಳು ಅದನ್ನು ವಿಶೇಷಗೊಳಿಸುತ್ತವೆ. ದಿನನಿತ್ಯದ ಆಹಾರದಲ್ಲಿ ಈ ಹಣ್ಣನ್ನು ಸೇರಿಸುವುದರಿಂದ ಹೃದಯದಿಂದ ಚರ್ಮದವರೆಗಿನ ಆರೋಗ್ಯ ಕಾಪಾಡಬಹುದು ಎಂದು ತಜ್ಞರ ಅಭಿಪ್ರಾಯ.

ಹೃದಯಕ್ಕೆ ಹಿತಕರ
ಬೆಣ್ಣೆ ಹಣ್ಣಿನಲ್ಲಿ ಮೊನೊಸಾಟುರೇಟೆಡ್ ಫ್ಯಾಟ್ಸ್ ಸಮೃದ್ಧವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತದೆ. ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ
ಈ ಹಣ್ಣಿನಲ್ಲಿ ಇರುವ ಡೈಟರಿ ಫೈಬರ್ ಜೀರ್ಣಾಂಗದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ನಿಯಮಿತ ಸೇವನೆಯಿಂದ ಆರೋಗ್ಯ ಸಮಸ್ಯೆಯನ್ನು ತಡೆಯಲು, ಅಜೀರ್ಣ ನಿವಾರಣೆಗೆ ಸಹಾಯಕವಾಗುತ್ತದೆ. ತೂಕ ನಿಯಂತ್ರಣದಲ್ಲಿ ಇಡಲು ಬಯಸುವವರಿಗೆ ಇದು ಉತ್ತಮ ಆಯ್ಕೆ.

ರಕ್ತದೊತ್ತಡ ನಿಯಂತ್ರಣ
ಬೆಣ್ಣೆ ಹಣ್ಣಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿನದಾಗಿ ಇರುವುದು, ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ನೀಡುತ್ತದೆ.

ಕಣ್ಣು ಮತ್ತು ಚರ್ಮದ ಆರೈಕೆ
ಆವಕಾಡೊಯಲ್ಲಿ ಇರುವ ಕ್ಯಾರೊಟಿನಾಯ್ಡ್‌ಗಳು ಕಣ್ಣಿನ ದೃಷ್ಟಿ ಶಕ್ತಿಯನ್ನು ಕಾಪಾಡುತ್ತವೆ. ವಿಟಮಿನ್ E ಮತ್ತು C ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತವೆ. ನಿಯಮಿತ ಸೇವನೆಯಿಂದ ಚರ್ಮ ತಾಜಾ ಮತ್ತು ನಯವಾಗಿರುತ್ತದೆ.

ಬೆಣ್ಣೆ ಹಣ್ಣು ಮನೆಮಾತಾಗದಿದ್ದರೂ, ಇದನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳುವುದರಿಂದ ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರಕ್ತದೊತ್ತಡ ಹಾಗೂ ಚರ್ಮದ ಆರೈಕೆಯಲ್ಲಿ ಬಹುಮಟ್ಟಿನ ಲಾಭ ಸಿಗುತ್ತದೆ. ಆರೋಗ್ಯಕ್ಕಾಗಿ ವಾರಕ್ಕೆ ಕನಿಷ್ಠ ಒಂದು ಬಾರಿ ಇದನ್ನು ಆಹಾರದಲ್ಲಿ ಸೇರಿಸುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!