ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ನೀವು ಕಡಿಮೆ ಸಮಯದಲ್ಲಿ ಕಣ್ಣಿನ ಕಾಯಿಲೆಗಳಿಗೆ ಒಳಗಾಗಬಹುದು. ರಾತ್ರಿ ಟಿವಿ ನೋಡುವಾಗ ದಯವಿಟ್ಟು ನಿಮ್ಮ ಕೋಣೆಯಲ್ಲಿ ಲೈಟ್ ಆಫ್ ಮಾಡಬೇಡಿ.
ಹೌದು, ನೀವು ಕತ್ತಲೆಯಲ್ಲಿ ಟಿವಿ ನೋಡಬಾರದು. ಏಕೆಂದರೆ ಟಿವಿ ಹೊರಸೂಸುವ ಬೆಳಕು ಸಣ್ಣ ಪ್ರಮಾಣದ ಯುವಿ ಕಿರಣಗಳನ್ನು ಹೊಂದಿರುತ್ತದೆ, ಇದು ರೆಟಿನಾವನ್ನು ಹಾನಿಗೊಳಿಸುತ್ತದೆ.
ಕೋಣೆಯಲ್ಲಿ ಲೈಟ್ ಇದ್ದರೆ ಆ ಬೆಳಕಿನ ಕಿರಣಗಳ ಜೊತೆ ಅತಿನೇರಳೆ ಕಿರಣಗಳು ಒಂದಾಗಿ ಕಣ್ಣಿನ ಮೇಲೆ ಬೀಳುವುದಾಗಲಿ, ರೆಟೀನಾಗೆ ಹಾನಿ ಉಂಟು ಮಾಡುವಂತಹ ತೀವ್ರತೆ ಕಡಿಮೆ. ಟಿವಿಯನ್ನು ಕನಿಷ್ಠ 1.5 ಮೀಟರ್ ದೂರದಿಂದ ನೋಡಬೇಕು.