January21, 2026
Wednesday, January 21, 2026
spot_img

HEALTH | ಈ ನಾಲ್ಕು ಪಾನೀಯಗಳನ್ನು ಅವಾಯ್ಡ್‌ ಮಾಡಿ ನಿಮ್ಮ ಕಿಡ್ನಿಯನ್ನು ಸೇವ್‌ ಮಾಡ್ಕೊಳಿ

ನಿಮ್ಮ ಕಿಡ್ನಿಯ ಬಗ್ಗೆ ಕಾಳಜಿ ಇದ್ರೆ ಈ ನಾಲ್ಕು ಪಾಣಿಯಗಳ ಅತಿಯಾದ ಸೇವನೆ ಇಂದೇ ನಿಲ್ಲಿಸಿ…

ಸೋಡಾ ಮೂತ್ರಪಿಂಡಗಳಿಗೆ ಅತ್ಯಂತ ಹಾನಿಕಾರಕ ಪಾನೀಯಗಳಲ್ಲಿ ಒಂದು. ಡಾರ್ಕ್ ಸೋಡಾದಲ್ಲಿರುವ ಫಾಸ್ಪರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲು ಬೆಳೆಯಲು ಕಾರಣವಾಗುತ್ತದೆ. ಇದು ಕಾಲಾನಂತರದಲ್ಲಿ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಜೊತೆಗೆ ಅತಿಯಾದ ಸಕ್ಕರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ.

ಹೆಚ್ಚು ಕೋಲಾ ಕುಡಿಯುವುದರಿಂದ ಮೂತ್ರದ ರಾಸಾಯನಿಕ ಸಂಯೋಜನೆ ಬದಲಾಗುತ್ತದೆ. ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಹಾಗಾಗಿ ಡಾರ್ಕ್ ಸೋಡಾ ಕಡಿಮೆ ಕುಡಿಯೋದ್ರಿಂದ ಕಿಡ್ನಿಗಳನ್ನ ಕಾಪಾಡಿಕೊಳ್ಳಬಹುದು.

ಸ್ಟ್ರಾಂಗ್ ಪಾನೀಯಗಳಲ್ಲಿ ಕೆಫೀನ್, ಸಕ್ಕರೆ ಮತ್ತು ಉತ್ತೇಜಕಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡಗಳ ಮೇಲೆ ಗಮನಾರ್ಹ ಒತ್ತಡ ಉಂಟಾಗುತ್ತದೆ. ಅತಿಯಾದ ಕೆಫೀನ್ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

ಹೆಚ್ಚಿನ ಸಕ್ಕರೆ ಅಂಶವಿರುವ ಪಾನೀಯಗಳು ರಕ್ತದೊತ್ತಡ ಹೆಚ್ಚಿಸುತ್ತವೆ. ನಿಯಮಿತ ಕಾಫಿ ಹಾನಿಕಾರಕವಲ್ಲ. ಆದರೆ ಹೆಚ್ಚು ಕೆಫೀನ್ ಅಥವಾ ಸಕ್ಕರೆ ಸೇರಿಸೋದ್ರಿಂದ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚಾಗುತ್ತದೆ.

Must Read