ಹೊಸದಿಗಂತ ವರದಿ,ಯಲ್ಲಾಪುರ :
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬಿ ಆರ್ ಪಿಗಳಿಗೆ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾಪರಿಷತ್ (ರಿ) ಮೈಸೂರು ಯಲ್ಲಾಪುರ ಘಟಕದ ವತಿಯಿಂದ ಆಯ್ಕೆಯಾದ ಬಿ ಆರ್ ಪಿ, ಬಿರ್ಟ್,ಮತ್ತು ಸಿ ಆರ್ ಪಿ ಗಳಿಗೆ ಪ್ರಸಕ್ತ ಸಾಲಿನ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಲ್ಲಾಪುರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್ ಆರ್ ಹೆಗಡೆ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಶ್ರೀ ರಾಮ ಹೆಗಡೆ ಗುರು ಸೇವಾ ರತ್ನ ಪುರಸ್ಕಾರಕ್ಕೆ ಆಯ್ಕೆಯಾದ ಬಿ ಆರ್ ಪಿ ಗಳಾದ ಸಂತೋಷ್ ಕುಮಾರ್ ಜಿಗಳೂರು ಪ್ರಶಾಂತ್ ಪಟಗಾರ ಸಂತೋಷ್ ನಾಯ್ಕ ದಿಲೀಪ್ ದೊಡ್ಡನೆ ಬಿರ್ಟ್ (BIERT) ಗಳಾದ ಎಂ ಎ ಬಾಗೇವಾಡಿ ಸಂಜೀವಕುಮಾರ್ ಹೊಕ್ಕೇರಿ ಸಿ ಆರ್ ಪಿ ಗಳಾದ ವಿಷ್ಣು ಭಟ್ ಮತ್ತು ವೆಂಕಟರಾಯ ನಾಯಕ್ ಇವರುಗಳಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಯಲ್ಲಾಪುರ ಘಟಕದ ವತಿಯಿಂದ ಗುರು ಸೇವಾ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಿ ಆರ್ ಪಿ ಎಸ್ ಬಿ ವೆರ್ಣೇಕರ್ ಸ್ವಾಗತಿಸಿ, ಶಿಕ್ಷಕರ ಪ್ರತಿಭಾ ಪರಿಷತ್ತಿನ ಕಾರ್ಯವೈಖರಿಗಳ ಕುರಿತು ಪ್ರಾಸ್ತವಿಕ ಮಾತನಾಡಿದರು . ಪ್ರಶಸ್ತಿಗೆ ಭಾಜನರಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.