ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೆರಡೇ ದಿನಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ನೆರವೇರುತ್ತಿದ್ದು, ಕೋಟ್ಯಂತರ ಜನರ ಕನಸು ನನಸಾಗಲಿದೆ.
ರಾಮಭಕ್ತರು ದೇಗುಲಕ್ಕೆ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ರಾಮ ಸೀತೆಯ ಹೆಸರಿರುವ ಉದ್ದುದ್ದದ ಸೀರೆ ನೇಯುವುದು, ರಾಮನಿಗೆ ನೈವೇದ್ಯವಾಗಿ ಬೃಹತ್ ಲಡ್ಡು ತಯಾರಿಸುವುದು, ದೊಡ್ಡ ಗಂಟೆ, ಪಾದಯಾತ್ರೆ ಹೀಗೆ ತಮಗೆ ಅನಿಸಿದ ರೀತಿಯಲ್ಲಿ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.
ಇದೀಗ ಅಯೋಧ್ಯೆಯ ಭವ್ಯ ಮಂದಿರ‍್ಕೆ 400 ಕೆಜಿ ತೂಕದ ಬೃಹತ್ ಬೀಗವನ್ನು ಭಕ್ತ ತಯಾರಿಸಿದ್ದು, ಬೀಗ ಅಯೋಧ್ಯೆ ತಲುಪಿದೆ.
ಎರಡು ವರ್ಷಗಳ ಹಿಂದೆಯೇ ರಾಮಮಂದಿರಕ್ಕಾಗಿ ಸತ್ಯ ಪ್ರಕಾಶ್ ಶರ್ಮಾ ಹಾಗೂ ಪತ್ನಿ ರುಕ್ಮಿಣಿ ಶರ್ಮಾ ಎಂಬ ವೃದ್ಧ ದಂಪತಿ ಬೀಗ ತಯಾರಿಸಿದ್ದರು. ಬೀಗಕ್ಕೆ ವಿಧಿವಿಧಾನದಂತೆ ಪೂಜೆ ನೆರವೇರಿಸಲಾಗಿದೆ. ಬೃಹತ್ ಬೀಗವನ್ನು ನೋಡಲು ಜನರು ಜಮಾಯಿಸಿದ್ದರು.