ಹೊಸದಿಗಂತ ವರದಿ ಬಾಗಲಕೋಟೆ:
ಭಾರತೀಯ ಜನತಾ ಪಾರ್ಟಿಯ ಅಸಂಖ್ಯಾತ ಕಾರ್ಯಕರ್ತರ ಹೋರಾಟದ ಫಲ ಇಂದು ಅಯೋದ್ಯ ಶ್ರೀ ರಾಮ ಮಂದಿರ ನಾಡಿಗೆ ಮುಕ್ತವಾಗಿದೆ,ಮುಂದೆ ಕಾಶಿ,ಮಥುರಾ ಕೂಡಾ ಮುಕ್ತವಾಗಲಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಅಯೋದ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ನಿಮಿತ್ಯ ಶುಕ್ರವಾರ ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ 108 ದಂಪತಿಗಳಿಂದ ಸಾಮೂಹಿಕ ಶ್ರೀರಾಮನಾಮ ತಾರಕ ಹೋಮದಲ್ಲಿ ಪಾಲ್ಗೋಂಡು ಶ್ರೀರಾಮನಿಗೆ 108 ನಾಮಾವಳಿ ಮೂಲಕ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೆ ದಿನಾಂಕ 22ರಂದು ಅಯೋಧ್ಯಯಲ್ಲಿ ನಡೆಯುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ದೇಶ ವಿದೇಶಗಳಲ್ಲಿ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಅಯೋದ್ಯಯಲ್ಲಿ ಇಂದು 25 ಸಾವಿರ ಹೋಮ ಕುಂಡದಲ್ಲಿ ಶ್ರೀರಾಮನಾಮ ತಾರಕ ಹೋಮ ನಡೆಯುವ ಶುಭ ಸಂಧರ್ಭದಲ್ಲಿ ಬಾಗಲಕೋಟೆಯಲ್ಲಿಯೂ ನಮ್ಮೆಲ್ಲ ಕಾರ್ಯಕರ್ತರ ಉತ್ಸಾಹದಿಂದ 108 ಹೋಮ ಕುಂಡಗಳಲ್ಲಿ ಸಕಲ ಸಮಾಜದ 108 ದಂಪತಿಗಳಿಂದ ಶ್ರೀರಾಮ ನಾಮ ತಾರಕ ಹೋಮ ಯಶಸ್ವಿಯಾಗಿದೆ, ದೇಶದಲ್ಲಿ ಶ್ರೀರಾಮ ಮಂದಿರ ಇದಿಗ ಮುಕ್ತವಾಗಿದ್ದು ಇದೆ ರಿತಿಯಲ್ಲಿ ಕಾಶಿ,ಮಥುರಾ ಕೂಡಾ ಮುಂದಿನ ದಿನಮಾನದಲ್ಲಿ ಮುಕ್ತವಾಗಲಿ ಎಂದರು.