ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Global Summit 2024)’ಸತ್ತಾ ಸಮ್ಮೇಳನ’ದಲ್ಲಿ ಎಐಎಂಐಎಂ ನಾಯಕ ಮತ್ತು ಸಂಸದ ಅಸಾದುದ್ದೀನ್ ಓವೈಸಿ (Asaduddin owaisi) ಭಾಗವಹಿಸಿ ಮಾತನಾಡಿದ್ದಾರೆ.
ಅಯೋಧ್ಯೆ (Ayodhya) ಬಗ್ಗೆ ಸುಪ್ರೀಂಕೋರ್ಟಿನ (Supreme Court) ತೀರ್ಪು ನಂಬಿಕೆಯ ಆಧಾರದ ಮೇಲೆ ನೀಡಿದೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ನಡೆದ ಹೋರಾಟ ಮಸೀದಿಯ ಬಗ್ಗೆ ಅಲ್ಲ, ಮಸೀದಿಯ ಹೊರಗಿನ ವೇದಿಕೆಯ ಬಗ್ಗೆ ಎಂದು ಅವರು ಹೇಳಿದ್ದಾರೆ.
ದೇಶದ ಅತಿದೊಡ್ಡ ನ್ಯಾಯಾಲಯವು ನಂಬಿಕೆಯ ಆಧಾರದ ಮೇಲೆ ತೀರ್ಪು ನೀಡಿದೆ. ನಂಬಿಕೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡರೆ ಸಾಕ್ಷ್ಯಗಳ ಕತೆಯೇನು? ರಾಮಮಂದಿರದ (Ram mandir)ನಿರ್ಧಾರಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಉದ್ಭವಿಸಿವೆ. ಇನ್ನು ಬಾಬರಿ ಮಸೀದಿಯಲ್ಲಿ ವಿಗ್ರಹಗಳನ್ನು ಇಡದೇ ಇದ್ದಿದ್ದರೆ 2024ರ ಜನವರಿ 22ರಂದು ರಾಮಮಂದಿರ ಕಾರ್ಯಕ್ರಮ ನಡೆಯುತ್ತಿತ್ತೇ? ಜನರು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದರು. ಆದರೆ ಡಿಸೆಂಬರ್ 6ರಂದು ಆ ಘಟನೆ ಸಂಭವಿಸಿಯೇ ಬಿಟ್ಟಿತು ಎಂದರು.
ದೇಶವು ನಂಬಿಕೆಯ ಆಧಾರದ ಮೇಲೆ ನಡೆಯಲು ಸಾಧ್ಯವಿಲ್ಲ . ಈ ದೇಶವು ಯಾವತ್ತೂ ಯಾವುದೇ ಧರ್ಮವನ್ನು ಹೊಂದಿಲ್ಲ, ಅದನ್ನು ಒಂದು ಧರ್ಮಕ್ಕೆ ಜೋಡಿಸಲು ಸಾಧ್ಯವಿಲ್ಲ. ನನ್ನ ನಂಬಿಕೆಗಿಂತ ಇನ್ನೊಬ್ಬರ ನಂಬಿಕೆ ದೊಡ್ಡದು ಎಂದು ಹೇಗೆ ಹೇಳುತ್ತೀರಿ? ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಅಯೋಧ್ಯೆಯಲ್ಲಿ ಹೋರಾಟವು ಮಸೀದಿಯ ಬಗ್ಗೆ ಅಲ್ಲ, ವೇದಿಕೆಯ ಬಗ್ಗೆ ಎಂದು ಹೇಳಿದ್ದಾರೆ. ಅಲ್ಲಿ ದೇವಸ್ಥಾನದ ಮೇಲೆ ಮಸೀದಿ ಕಟ್ಟಿರಲಿಲ್ಲ. ರಾಮ ಮಂದಿರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಉದ್ಭವಿಸಿವೆ. ಬಾಬರಿ ಧ್ವಂಸ ಪ್ರಕರಣದ ಯಾವುದೇ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ಓವೈಸಿ ಹೇಳಿದ್ದಾರೆ
ರೈತರ ಬಗ್ಗೆ ಮಾತನಾಡಿದ ಅಸಾದುದ್ದೀನ್ ಓವೈಸಿ, ನಾವು ರೈತ ಚಳವಳಿಯನ್ನು ಬೆಂಬಲಿಸುತ್ತೇವೆ. ರೈತ ಚಳವಳಿ ರಾಜಕೀಯೇತರ ಚಳವಳಿ. ರೈತರ ಪ್ರತಿಭಟನೆ ರಾಜಕೀಯ ರಹಿತವಾದ ಚಳವಳಿಯಾದ ಕಾರಣ ಅವರ ಬೆಂಬಲಕ್ಕೆ ನಾವು ಅಲ್ಲಿಗೆ ಹೋಗಲಿಲ್ಲ. ನಾವು ಅಲ್ಲಿಗೆ ಹೋಗಿ ವಾತಾವರಣವನ್ನು ಹಾಳು ಮಾಡಲು ಬಯಸುವುದಿಲ್ಲ ಎಂದರು.
ಲೋಕಸಭೆ ಚುನಾವಣೆಗೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಳಿದಾಗ ಅವರು, ಹೌದು ನಾವು ಖಂಡಿತವಾಗಿಯೂ ಮೈತ್ರಿ ಮಾಡಿಕೊಳ್ಳುತ್ತೇವೆ. ನಾವು ಇನ್ನೂ ಮಾತನಾಡುತ್ತಿದ್ದೇವೆ. ಈ ಬಗ್ಗೆ ನಾವು ಈಗಲೇ ಯಾವುದನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಹಲವು ರಾಜ್ಯಗಳಲ್ಲಿ ನಮ್ಮ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ, ಈ ಕುರಿತು ಕೇಳಿದಾಗ,ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ನಾನು ಪ್ರಧಾನಿಯಾಗುವ ಕನಸು ಕೂಡಾ ನನಗಿಲ್ಲ ಎಂದಿದ್ದಾರೆ.