ಅಮೆರಿಕದಲ್ಲೂ ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಂಭ್ರಮ: ಮನೆ ಮನೆಯಲ್ಲೂ ಬೆಳಗಲಿದೆ ದೀಪಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಜಗತ್ತೇ ಆಕ್ಷಣಕೆ ಕಾಯುತ್ತಿದೆ.

ದೇಶವಾಸಿಗಳು ಮಾತ್ರವಲ್ಲದೆ ರಾಮಮಂದಿರದ ಉದ್ಘಾಟನೆಯ ಸಂಭ್ರಮಾಚರಣೆಗಾಗಿ ಪ್ರತಿ ಮನೆಯಲ್ಲೂ ಐದು ದೀಪಗಳನ್ನು ಬೆಳಗಿಸಲು ಅಮೆರಿಕದಲ್ಲಿನ ಹಿಂದುಗಳು ನಿರ್ಧರಿಸಿದ್ದಾರೆ.

ಇದರ ಜೊತೆಗೆ ಜ. ೨೨ ೨೦೨೪ ರಂದು ವಿವಿಧ ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ನಡೆಸುವುದು, ಭವ್ಯ ಉದ್ಘಾಟನಾ ಸಮಾರಂಭವನ್ನು ದೊಡ್ಡ ಪರದೆಗಳಲ್ಲಿ ನೇರಪ್ರಸಾರ ಮಾಡುವುದು, ಸಮುದಾಯ ಸಭೆ ಮತ್ತು ಪಾರ್ಟಿಗಳನ್ನು ಏರ್ಪಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದಾರೆ.

ಅಮೆರಿಕದ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿ ಅಮಿತಾಭ್ ಮಿತ್ತಲ್ , ಮಹೋತ್ಸವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇಗುಲಗಳು, ವ್ಯಕ್ತಿಗಳ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಲಾಗುತ್ತಿದೆ. ಜನರ ಅನುಕೂಲಕ್ಕಾಗಿ https//rammandir2024.org ವೆಬ್​ಸೈಟ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮೆಲ್ಲರ ಪಾಲಿಗೆ ಇದು ಕನಸಿನ ಮಾತು. ಈ ದಿನವನ್ನು ನೋಡಬಹುದು ಎಂದು ನಮ್ಮ ಜೀವನದಲ್ಲಿ ಎಂದೂ ಯೋಚಿಸಿರಲಿಲ್ಲ. ಈಗ ಸಂಭ್ರಮಿಸುವ ಸಮಯ. ರಾಮಮಂದಿರಕ್ಕಾಗಿ ಅಸಂಖ್ಯಾತ ಜನರು ಹೋರಾಡಿದ್ದಾರೆ. ನಮಗೆ ಶೀಘ್ರದಲ್ಲೇ ಅಯೋಧ್ಯೆಗೆ ಹೋಗಬೇಕು ಅಂತ ಅನಿಸುತ್ತದೆ ಎಂದು ಚಿಕಾಗೋದ ಡಾ. ಭರತ್ ಬರಾಯಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!