ಹೊಸದಿಗಂತ ವರದಿ ತುಮಕೂರು:
ಅಯೋಧ್ಯೆಯ ರಾಮಮಂದಿರದ ಶ್ರೀರಾಮ ದೇವರಿಗೆ ಅರ್ಪಿಸಲಾದ ಪವಿತ್ರವಾದ ಅಕ್ಷತೆ ನವೆಂಬರ್ 25ರಂದು ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ವಿಶ್ವ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ರಾದ ಜಿ.ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
2023ರ ನವೆಂಬರ್5 ರಂದು ದೇವರಿಗೆ ಅರ್ಪಿಸಿದ ಅಕ್ಷತೆಯು ನವೆಂಬರ್ 25ರ ಸಂಜೆ 4ಗಂಟೆಗೆ ಸಿದ್ಧಗಂಗ ಕ್ಷೇತ್ರಕ್ಕೆ ಬರಲಿದೆ. ಜಿಲ್ಲೆಯ ಪರವಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸ್ವೀಕರಿಸುವರು. ನಂತರ ಶ್ರೀಗಳು ಅಕ್ಷತೆಯ ಭಂಡಾರವನ್ನು ರಜತರಥದಲ್ಲಿಟ್ಟು ಪೂಜಿಸುವರು. ಅಲ್ಲಿಂದ ರೇವು ಬಿ.ಹೆಚ್.ರಸ್ತೆಯ ಮೂಲಕ ಶಂಕರಮಠ ತಲುಪುವುದು ಅಲ್ಲಿಂದ ಬೃಹತ್ ಶೋಭಾಯಾತ್ರೆಯಲ್ಲಿ ಭಜನಾ ತಂಡಗಳು, 108ಮಹಿಳೆಯರ ಪೂರ್ಣ ಕುಂಭಗಳು ಮತ್ತು ಶ್ರದ್ಧಾ ಹಿಂದೂ ಬಾಂಧವರು ಮಹಾನಗರ ಪಾಲಿಕೆಯ ವೃತ್ತದಲ್ಲಿನ ನಾಗರಕಟ್ಟೆಗೆ ಕರೆತರುವರು.
ಶೋಭಾಯಾತ್ರೆಯ ನಂತರ ಅಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ತಿನ ಮೂಲಕ ಜಿಲ್ಲೆಯ ಎಲ್ಲಾ ಮನೆಗಳಿಗೂ ತಲುಪಿಸಲಾಗುವುದು ಎಂದು ತಿಳಿಸಿದರು. ಈ ಶೋಭಾಯಾತ್ರೆಯಲ್ಲಿ ಭಾಗವಹಿಸುವಂತೆ ನಗರದ ಹಿಂದೂ ಬಾಂಧವರಲ್ಲಿ ವಿನಂತಿ ಮಾಡಲಾಗಿದೆ.