ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಸಿದ್ಧವಾಗುತ್ತಿದ್ದು, ಜನವರಿ 22ರಂದು ರಾಮಲಲಾ ಪ್ರಾಣಪ್ರತಿಷ್ಠೆ ನಡೆಯಲಿದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ 153 ದೇಶಗಳ ಪವಿತ್ರ ನದಿ ನೀರನ್ನು ಬಳಕೆ ಮಾಡಲಾಗುತ್ತಿದೆ. ಈ ಪೈಕಿ 1528ರಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿ ಕಟ್ಟಿದ ಬಾಬರ್ ಹುಟ್ಟೂರು ಉಜಬೇಕಿಸ್ತಾನ್‌ನಿಂದ ನದಿ ನೀರನ್ನು ಪ್ರಾಣಪ್ರತಿಷ್ಠೆಗೆ ಬಳಸಲಾಗುತ್ತಿದೆ.
ಮೊಘಲ ದಾಳಿಕೋರ ಬಾಬರ್ ಹುಟ್ಟೂರು ಉಜಬೇಕಿಸ್ತಾನದ ನದಿಯಿಂದಲೂ ನೀರನ್ನು ತರಲಾಗಿದೆ. ಪಾಕಿಸ್ತಾನ, ದುಬೈ, ಚೀನಾ, ಅಂಟಾರ್ಟಿಕಾ, ಕೀನ್ಯಾ ಸೇರಿದಂತೆ 153 ದೇಶದ ನದಿಯ ನೀರನ್ನು ತರಲಾಗಿದೆ.ಈ ನೀರನ್ನು ಪ್ರಾಣಪ್ರತಿಷ್ಠೆಯಲ್ಲಿ ಬಳಸಲಾಗುತ್ತದೆ. ವಿವಿದ ದೇಶದಲ್ಲಿನ ಎಲ್ಲಾ ಸಮುದಾಯದ ಜನರು ರಾಮ ಮಂದಿರದಲ್ಲಿ ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯದ ಮುಹೂರ್ತ ನಿಗದಿಪಡಿಸಲಾಗಿದೆ. ಅಂದು ಮಧ್ಯಾಹ್ನ 12.20ಕ್ಕೆ ರಾಮನ ಪ್ರತಿಷ್ಠಾಪನೆ ಮಾಡಲು ನಿರ್ಣಯಿಸಲಾಗಿದೆ.2024ರ ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಜಟಾಯು ಪ್ರತಿಮೆಯನ್ನೂ ಮೋದಿ ಅನಾವರಣ ಮಾಡಲಿದ್ದಾರೆ. ಪ್ರತಿಷ್ಠಾಪನೆಯ ಮಾರನೇ ದಿನ ಭಕ್ತರಿಗೆ ದೇವಾಲಯ ತೆರೆಯಲಾಗುತ್ತದೆ. ಈ ನಡುವೆ, ಪ್ರತಿಷ್ಠಾಪನೆ ವೇಳೆ ದೇಶಾದ್ಯಂತ ವಿವಿಧ ದೇಗುಲಗಳಲ್ಲಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್ ಹೇಳಿದೆ.