ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ವತಂತ್ರ್ಯ ಭಾರತದ ಕನಸುಹೊತ್ತು ಪ್ರಾಣತ್ಯಾಗ ಮಾಡಿದ ಮಹೋನ್ನತ ಹೋರಾಟಗಾರ ಕರ್ನಾಟಕದ ಯಲ್ಲಯ್ಯ ಪ್ರಾತಃಸ್ಮರಣೀಯರು. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ನಿವಾಸಿ ಯಲ್ಲಯ್ಯ ವಸಹಾತುಶಾಹಿಗಳ ವಿರುದ್ಧ ಉಗ್ರವಾಗಿ ಸಿಡಿದುನಿಂತಿದ್ದ ಧೀರ. 1857-58ರಲ್ಲಿ ಭೀಮ್ ರಾವ್ ಮತ್ತು ಕಾಂಚನ್ ಗೌಡರ ನೇತೃತ್ವದಲ್ಲಿ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಯಲ್ಲಯ್ಯ ಅವರ ಪರಾಕ್ರಮ ಬ್ರಿಟೀಷರನ್ನು ನಡುಗಿಸಿತ್ತು. ಬ್ರಿಟಿಷರ ಹಿಡಿತದಲ್ಲಿದ್ದ ಕೊಪ್ಪಲದುರ್ಗದ ಪುನರ್ ವಶಕ್ಕಾಗಿ ಹೋರಾಡುತ್ತಿದ್ದ ಯಲ್ಲಯ್ಯರನ್ನು ಜೂನ್ 1858 ರಲ್ಲಿ ಮಸ್ಕಟ್ರಿ ಎಂಬಲ್ಲಿ ಸೆರೆಹಿಡಿಯಲಾಯಿತು. ಆ ಬಳಿಕ ಚಿತ್ರಹಿಂಸೆ ನೀಡಿ ಗುಂಡಿಕ್ಕಿ ಕೊಲ್ಲಲಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ