ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮ್‌ದರ್ದ್ ಕಂಪನಿಯ ಉತ್ಪನ್ನ ರೂಹ್ ಅಫ್ಜಾ ಕುರಿತಂತೆ ಹೇಳಿರುವ ‘ಶರಬತ್ ಜಿಹಾದ್’ ಹೇಳಿಕೆ ಇರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುತ್ತೇವೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ರಾಮದೇವ ಒಡೆತನದ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಇಂಡಿಯಾ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿದ್ದು, ಈ ಹೇಳಿಕೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕಲಕಿವೆ ಹಾಗೂ ಇವುಗಳನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ ಬೆನ್ನಲ್ಲೇ ರಾಮ್ ದೇವ್ ಭರವಸೆ ನೀಡಿದ್ದಾರೆ.
ಪತಂಜಲಿ ಉತ್ಪನ್ನವಾದ ಗುಲಾಬ್ ಶರಬತ್ ಕುರಿತ ಪ್ರಚಾರದ ವೇಳೆ ಮಾತನಾಡಿದ್ದ ರಾಮದೇವ ಅವರು, ಹಮ್‌ದರ್ದ್‌ನ ರೂಹ್ ಅಫ್ಜಾ ಮಾರಾಟದಿಂದ ಬರುವ ಹಣವನ್ನು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ ಎಂಬುದಾಗಿ ಹೇಳಿದ್ದರು.