ಮುಗ್ಧ ಕಂದಮ್ಮಗಳು ರಾತ್ರಿಯ ಹೊತ್ತು ಬೇಗ ನಿದ್ರೆ ಮಾಡದೇ ಇರುವುದು ತಾಯಂದಿರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಏನು?
1. ಎಣ್ಣೆ ಮಸಾಜ್: ಮುಂಜಾನೆ ಎಣ್ಣೆ ಮಸಾಜ್ ಕಂದಮ್ಮಗಳಿಗೆ ತುಂಬಾ ಪರಿಣಾಮಕಾರಿ. ಎಣ್ಣೆ ಮಸಾಜ್ನಿಂದ ದಿನದ ಸುಸ್ತನ್ನು ನಿವಾರಿಸಿ ನಂತರ ಬೆಚ್ಚಗಿನ ಸ್ನಾನವು ಆಯಾಸವನ್ನು ನಿವಾರಿಸುತ್ತದೆ, ನಿಮ್ಮ ಮಗುವಿಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
2. ಸಂಗೀತ: ಚಿಕ್ಕ ಮಕ್ಕಳು ನಿದ್ದೆ ಮಾಡುವಾಗ ಮೃದುವಾದ ಸಂಗೀತವನ್ನು ಕೇಳಿಸುವುದರಿಂದ ನಿದ್ರೆಗೆ ಜಾರುತ್ತಾರೆ.
3. ಹಣೆ, ಅಂಗೈ ಮತ್ತು ಪಾದಗಳನ್ನು ಮಸಾಜ್ ಮಾಡಿ: ಚಿಕ್ಕ ಮಕ್ಕಳಿಗೆ, ಹಣೆಯನ್ನು ಮೃದುವಾಗಿ ಮಸಾಜ್ ಮಾಡಿ. ಹುಬ್ಬುಗಳನ್ನು ಮೃದುವಾಗಿ ಮಸಾಜ್ ಮಾಡಿ. ಜೊತೆಗೆ, ಮಗುವಿನ ಅಂಗೈ ಮತ್ತು ಪಾದದ ಮೃದುವಾದ ಒತ್ತಡವು ನಿಮ್ಮ ಚಿಕ್ಕ ಮಗುವನ್ನು ಆಳವಾದ ನಿದ್ರೆಗೆ ಬೀಳುವಂತೆ ಮಾಡುತ್ತದೆ.