ಹೊಸದಿಗಂತ ಡಿಜಿಟಲ್ ಡೆಸ್ಕ್:
RCB ತಂಡದ ವಿರುದ್ಧ ಸದಾ ಕೊಂಕು ಮಾತನಾಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಇದೀಗ ಯೂಟರ್ನ್ ಹೊಡೆದಿದ್ದಾರೆ.
ಅದು ಕೂಡ ಸಿಎಸ್ಕೆ ವಿರುದ್ಧ ಆರ್ಸಿಬಿ ತಂಡವು ಭರ್ಜರಿ ಜಯ ಸಾಧಿಸುತ್ತಿದ್ದಂತೆ ತಮ್ಮ ಹೇಳಿಕೆಯನ್ನೇ ಬದಲಾಯಿಸಿದ್ದಾರೆ.
ಹೌದು, ಪ್ರಮುಖ ಸ್ಪೋರ್ಟ್ಸ್ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್ಸಿಬಿ ತಂಡವು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ, ಏನೋ ಸಾಧಿಸುವ ಹಂಬಲ ಆರ್ಸಿಬಿ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿ ಆರ್ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.