ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾತ್ರಿ ವೇಳೆ ಸಿಗ್ನಲ್ ವೈಫಲ್ಯದಿಂದ ಸರಕು ಸಾಗಣೆ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿ ಭಾರಿ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ನಲ್ಲಿ ಘಟನೆ ನಡೆದಿದೆ.
ಗೂಡ್ಸ್ ರೈಲು ಹೈದರಾಬಾದ್‌ನಿಂದ ಮುಂಬೈಗೆ ಕಾಂಕ್ರೀಟ್ ಬ್ಲಾಕ್‌ಗಳನ್ನು ಹೊತ್ತೊಯ್ಯುತ್ತಿತ್ತು. ಈ ಹಂತದಲ್ಲಿ ರೈಲಿನ ನಾಲ್ಕು ಬೋಗಿಗಳು ವಾಡಿ ಸಮೀಪಕ್ಕೆ ಬರುತ್ತಿದ್ದಂತೆ ಕ್ರಾಸಿಂಗ್ ಸಿಗ್ನಲ್ ತಪ್ಪಿದ್ದರಿಂದ ಹಳಿತಪ್ಪಿತ್ತು. ಅದೃಷ್ಟವಶಾತ್ ರೈಲು ಬಾರದೆ, ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ಮಾಹಿತಿ ತಿಳಿದ ಕೂಡಲೇ ಹಿರಿಯ ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹಳಿ ತಪ್ಪಿದ ಟ್ರಾಲಿಗಳನ್ನು ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದ್ದು. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.