ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪೂಜಾ ಹೆಗ್ಡೆಗೆ ಈ ವರ್ಷ ಅಷ್ಟೇನೂ ಲಕ್ಕಿಯಾಗಿಲ್ಲ, ಈಗಾಗಲೇ ಮಹೇಶ್ ಬಾಬು ಜೊತೆಗಿನ ಗುಂಟೂರು ಖಾರಂ ಸಿನಿಮಾದಿಂದ ಪೂಜಾ ಹೊರಬಂದಿದ್ದು, ರವಿತೇಜ ಜೊತೆಗಿನ ಸಿನಿಮಾದಿಂದಲೂ ಪೂಜಾ ಔಟ್ ಆಗಿದ್ದಾರೆ,
ಗುಂಟೂರು ಖಾರಂ ಸಿನಿಮಾದ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪೂಜಾ ಇದರಿಂದ ಹೊರಬಂದಿದ್ದರು. ಆದರೆ ಈ ಸಿನಿಮಾದಲ್ಲಿ ಶ್ರೀಲೀಲಾ ಎರಡನೇ ನಾಯಕಿ, ಇಬ್ಬರು ನಾಯಕಿಯರು ಇರುವ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಪೂಜಾ ಹೇಳಿದ್ದಾರಂತೆ.
ಇನ್ನು ರವಿತೇಜ ಜೊತೆಗಿನ ಸಿನಿಮಾ ಶೂಟಿಂಗ್ ಕೆಲವೇ ದಿನಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಪೂಜಾ ಈ ಸಿನಿಮಾದಿಂದಲೂ ಔಟ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.