ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರು ಸುಧಾಕರ್ ಗೌಡ ಅವರನ್ನು ಬಂಧಿಸಿದ್ದಾರೆ.
ಈ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ಯೂಟ್ಯೂಬರ್ ಭಾಗಿಯಾಗಿದ್ದರು. ಆ ಪ್ರಕರಣ ಸಂಬಂಧ ಸುಧಾಕರ್ ವಿರುದ್ಧ ವಾರೆಂಟ್ ಇಶ್ಯೂ ಆಗಿತ್ತು. ಅಲ್ಲದೇ ಮಾರ್ಟಿನ್ ಸಿನಿಮಾ ವಿಚಾರವಾಗಿ ಕೂಡ ವಿವಾದ ಆಗಿತ್ತು. ಮಾರ್ಟಿನ್ ಸಿನಿಮಾ ರಿವ್ಯೂವ್ ಬಗ್ಗೆ ಸುಧಾಕರ್ ಮಾತಾಡಿದ್ದರು. ಸಿನಿಮಾ ಚೆನಾಗಿಲ್ಲ. ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಪಾಲಜಿ ಲೆಟರ್ ಬರೆಸಿಕೊಂಡು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಸುಧಾಕರ್ ಗೌಡನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.