ರಾತ್ರಿ ಸಮಯದಲ್ಲಿ ಮಾತ್ರ ನೆಗೆಟಿವ್ ಆಲೋಚನೆಗಳು ಬರುತ್ತದೆ ಎಂದರೆ ಇದಕ್ಕೆ ಕಾರಣಗಳಿವೆ, ಆಲೋಚನೆಗಳು ಕೆಲವೊಮ್ಮೆ ಆಂಕ್ಸೈಟಿಗೆ ಕಾರಣವಾಗಬಹುದು, ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಬಹುದು. ನೆಗೆಟಿವ್ ಆಲೋಚನೆಗಳನ್ನು ಓಡಿಸೋದು ಹೇಗೆ?
- ರಾತ್ರಿ ಹೊತ್ತೇ ಭಾವನೆಗಳೇಕೆ ಬರುತ್ತಿದೆ? ಕತ್ತಲಿನ ಭಯವಾ? ಯಾವುದಾದರೂ ವಿಷಯ ಟ್ರಿಗರ್ ಮಾಡುತ್ತಿದೆಯಾ? ಯಾವುದಾದರೂ ಸನ್ನಿವೇಶ ಟ್ರಿಗರ್ ಮಾಡುತ್ತದೆಯಾ ಗಮನಿಸಿ.
- ಆ ಸಮಯದಲ್ಲಿ ನಿಮ್ಮ ಮೂಡ್ ಹೇಗಿದೆ ಸಿಟ್ಟು, ಭಯ, ನರ್ವಸ್, ಗಿಲ್ಟ್ ನಿಮ್ಮ ಭಾವನೆಗಳನ್ನು ಮೊದಲು ಕಂಡುಕೊಳ್ಳಿ
- ಯಾವ ರೀತಿ ಕೆಟ್ಟ ಆಲೋಚನೆ ಬರುತ್ತಿದೆ, ಬಂದು ಹೋದ ನಂತರ ನಿಮ್ಮ ರಿಯಾಕ್ಷನ್ ಹೇಗಿದೆ, ನಾನು ದಡ್ಡಿ, ನನ್ನನ್ನು ಯಾರು ಇಷ್ಟಪಡೋದಿಲ್ಲ, ಕೆಟ್ಟದು ಆಗುತ್ತದೆ, ಯಾರಿಗೂ ನಾನು ಬೇಡ, ನನ್ನಿಂದ ಕೆಟ್ಟದಾಯ್ತು, ಇಂಥ ಸನ್ನಿವೇಶ ಬಂದರೆ ನಾನೇನು ಮಾಡಲಿ.. ನಿಮ್ಮ ಭಾವನೆ ಗಮನಿಸಿ.
- ಇದನ್ನು ಸರಿ ಮಾಡಿಕೊಳ್ಳೋದು ಹೇಗೆ ಎನ್ನುವ ಆಲೋಚನೆಗೆ ಹೆಚ್ಚು ಒತ್ತು ಕೊಡಿ ಅಪಘಾತ ಆಗುತ್ತದೆ ಎನಿಸಿದರೆ, ಯಾಕೆ ಆಗುತ್ತದೆ, ಇಷ್ಟು ವರ್ಷದ ರೀತಿ ಈಗಲೂ ಸೇಫ್ ಆಗಿಯೇ ಇರುತ್ತೇನೆ ಎಂದು ಹೇಳಿಕೊಳ್ಳಿ.
- ನೆಗೆಟಿವ್ ಆಲೋಚನೆಯನ್ನು ಅಲ್ಲಿಯೇ ಸ್ಟಾಪ್ ಮಾಡಿ, ತಕ್ಷಣ ಬೇರೆ ಆಲೋಚನೆ ಮಾಡಿ. ಯೋಚಿಸದೇ ಹೋದರೆ ಅವು ಸುಳಿಯೋದಿಲ್ಲ.
- ಎಲ್ಲವೂ ಒಳ್ಳೆಯದೇ ಆಗಲಿದೆ, ನಾನು ಒಳ್ಳೆಯದನ್ನೇ ಮಾಡಿದ್ದೇನೆ, ನನಗೆ ಒಳ್ಳೆಯದೇ ಆಗಲಿದೆ ಹೀಗೆ ಹೇಳಿಕೊಳ್ಳಿ.