ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಬೆಳಿಗ್ಗೆ ಹವಾಮಾನ ವೈಪರೀತ್ಯದಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸುಮಾರು 20 ವಿಮಾನಗಳ ಹಾರಾಟದ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಜೈಪುರ, ಅಮೃತಸರ , ಲಕ್ನೋ , ಅಹಮದಾಬಾದ್ ಮತ್ತು ಚಂಡೀಗಢಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಳಗ್ಗಿನ ಹೊತ್ತು 7.30 ಮತ್ತು 10.30 ರ ನಡುವೆ ಇಳಿಯಬೇಕಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಒಟ್ಟು 13 ವಿಮಾನಗಳನ್ನು ಜೈಪುರಕ್ಕೆ, ನಾಲ್ಕು ವಿಮಾನಗಳನ್ನು ಅಮೃತಸರಕ್ಕೆ ಮತ್ತು ಲಕ್ನೋ, ಅಹಮದಾಬಾದ್ ಮತ್ತು ಚಂಡೀಗಢಕ್ಕೆ ತಲಾ ಒಂದನ್ನು ತಿರುಗಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.