ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 25 ರಂದು ಸೂರ್ಯಗ್ರಹಣ ಹಿನ್ನೆಲೆ ಬದರಿನಾಥ್-ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಿರುತ್ತದೆ ಎಂದು ದೇವಾಲಯದ ಸಮಿತಿ ತಿಳಿಸಿದೆ. ಗ್ರಹಣ ಮುಗಿದ ಬಳಿಕ ಯಥಾಸ್ಥಿತಿ ಪೂಜೆಗಳು ನೆರವೇರಲಿವೆ ಎಂದು ಶ್ರೀ ಕೇದಾರನಾಥ-ಬದರಿನಾಥ ದೇವಾಲಯ ಸಮಿತಿಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ, ಬದರಿನಾಥಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಧಾನಿಗೆ ಸಾಥ್ ನೀಡಿದರು.