March 18, 2026
Wednesday, March 18, 2026
spot_img

ಬಾಗಲಕೋಟೆ ಬೈ ಎಲೆಕ್ಷನ್: ಮೇಟಿ ಮಕ್ಕಳ ‘ಟಿಕೆಟ್ ಫೈಟ್’ಗೆ ಸಿದ್ದರಾಮಯ್ಯ ಫುಲ್ ಸ್ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ‘ಕುಟುಂಬ ರಾಜಕಾರಣ’ದ ಕಿಚ್ಚು ಹತ್ತಿಕೊಂಡಿತ್ತು. ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಾಲ್ವರು ಮಕ್ಕಳ ನಡುವೆ ಟಿಕೆಟ್‌ಗಾಗಿ ಶುರುವಾಗಿದ್ದ ಪೈಪೋಟಿಯನ್ನು ಸಿಎಂ ಸಿದ್ದರಾಮಯ್ಯ ಇಂದು ಯಶಸ್ವಿಯಾಗಿ ತಣ್ಣಗಾಗಿಸಿದ್ದಾರೆ.

ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಯ ಎಚ್ಚರಿಕೆ ನೀಡಿದ್ದ ಮೇಟಿ ಅವರ ಪುತ್ರಿ ಮಹಾದೇವಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಮತ್ತೊಬ್ಬ ಪುತ್ರಿಯನ್ನು ಬೆಂಗಳೂರಿಗೆ ಕರೆಯಿಸಿ ಸಿಎಂ ಸಭೆ ನಡೆಸಿದರು.

“ಕುಟುಂಬದ ನಾಲ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಉಳಿದವರು ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು” ಎಂದು ಸಿದ್ದರಾಮಯ್ಯ ಖಡಕ್ ಆಗಿ ಸೂಚಿಸಿದ್ದಾರೆ.

ಮಲ್ಲಿಕಾರ್ಜುನ, ಉಮೇಶ, ಬಾಯಕ್ಕ ಹಾಗೂ ಮಹಾದೇವಿ ಅವರು ಸಿಎಂ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಬಂಡಾಯದ ಭೀತಿ ಸದ್ಯಕ್ಕೆ ದೂರವಾಗಿದೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮೇಟಿ ಕುಟುಂಬದ ಸದಸ್ಯರ ಒಮ್ಮತದ ನಿರ್ಧಾರವನ್ನು ಖಚಿತಪಡಿಸಿದರು. ಈ ಮೂಲಕ ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬದ ಪಾಲಾಗುವುದು ಈಗ ಬಹುತೇಕ ಖಚಿತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !