ಕಾಂಗ್ರೆಸ್ ನಿಂದ ಬಜರಂಗದಳ ನಿಷೇಧ ಘೋಷಣೆ: BJP ನಾಯಕರಿಂದ ಪ್ರೊಫೈಲ್ ಫೋಟೋ ಬದಲಿಸಿ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು,ಈ ನಡುವೆ ರಾಜಕೀಯ ಪಾರ್ಟಿಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದು, ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

ನಿನ್ನೆಯಷ್ಟೇ ಬಿಜೆಪಿ ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಇದೀಗ ಇಂದು ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದೆ.

ಇತ್ತ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಇದಕ್ಕೆ ಮುಖ್ಯಕಾರಣ ಬಜರಂಗದಳವನ್ನು (Bajrang Dal) ನಿಷೇಧಿಸುತ್ತೇವೆ ಎಂದು ಘೋಷಣೆ ಮಾಡಿದ್ದು .

ಕಾಂಗ್ರೆಸ್‌ ಬಜರಂಗದಳ ನಿಷೇಧ ಭರವಸೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡ್ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಭರವಸೆ ವಿರುದ್ಧ ಬಿಜೆಪಿ ಡಿಜಿಟಲ್ ಅಭಿಯಾನ ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ʻಜೈ ಭಜರಂಗಿ‌ ಕ್ಯಾಂಪೇನ್ʼ ಶುರುವಾಗಿದೆ. ‘ ನಾನೊಬ್ಬ ಕನ್ನಡಿಗ ,ನನ್ನ ನಾಡು ನಾನು ಹನುಮ ಜನಿಸಿದ ನಾಡು , ನಾನೊಬ್ಬ ಬಜರಂಗಿ’ ಎಂದು ಪ್ರೊಫೈಲ್ ಫೋಟೋ ಹಾಕುತ್ತಿದ್ದಾರೆ. ಇದಲ್ಲದ್ದೇ , ಹನುಮನ ನಾಡಲ್ಲಿ ಹನುಮಭಕ್ತರಿಗೆ ನಿಷೇಧವೇ?, ರಾಮನ ಮೇಲಾಣೆ ಮಾಡುವೆವು ನಿಮ್ಮನು ಸೋಲಿಸದೇ ಬಿಡೆವು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಗಳು ಹರಿದಾಡುತ್ತಿದೆ.



ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!