ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಶಕ್ತಿ ತುಂಬಿದ ಭಜರಂಗ ಸೇನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿವಿದ್ದು, ಮತ್ತೆ ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದರೆ, ಇತ್ತ ಹಿಂದುತ್ವ ಸಂಘಟನೆ ಭಜರಂಗ ಸೇನೆ ಮಂಗಳವಾರ ಕಾಂಗ್ರೆಸ್ ನೊಂದಿಗೆ ವಿಲೀನವಾಗಿದೆ.

ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ವಿಲೀನ ನಡೆಯಿತು.ನೂರಾರು ಭಜರಂಗ ಸೇನೆ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ದೀಪಕ್ ಜೋಶಿ ಅವರಿಗೆ ಭಜರಂಗ ಸೇನೆ ಮುಖಂಡರು ಆಪ್ತರಾಗಿದ್ದಾರೆ. ಭಜರಂಗ ಸೇನೆ ರಾಷ್ಟ್ರೀಯ ಅಧ್ಯಕ್ಷ ರಜನೀಶ್ ಪಟೇರಿಯಾ ಮತ್ತು ಸಂಯೋಜಕ ರಘುನಂದನ್ ಶರ್ಮಾ ಅವರು ವಿಲೀನದ ಘೋಷಣೆ ಮಾಡಿದ್ದಾರೆ.

ಕಮಲ್ ನಾಥ್ ಅವರಿಗೆ ಗದೆ ಹಾಗೂ ಸ್ಮರಣಿಕೆ ನೀಡಿದ ಭಜರಂಗ ಸೇನೆ ಸದಸ್ಯರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಈ ಬೆಳವಣಿಗೆಯನ್ನು ಸ್ವಾಗತಿಸಿದ ಕಮಲ್ ನಾಥ್, ಚುನಾವಣೆ ಸಮೀಪಿಸುತ್ತಿರುವಾಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಪೊಳ್ಳು ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚೌಹಾಣ್ ಇದುವರೆಗೆ 20,000 ಕ್ಕೂ ಹೆಚ್ಚು ಘೋಷಣೆ ಮಾಡಿದ್ದಾರೆ, ಅದು ಎಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಚೌಹಾಣ್ ಈಗ ಮಹಿಳೆಯರು, ಯುವಕರು ಮತ್ತು ಉದ್ಯೋಗಿಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು 18 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗಲೂ ಏನನ್ನೂ ಮಾಡಿಲ್ಲ ಎಂದು ಕಮಲ್ ನಾಥ್ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!