ಬಾಲರಾಮ ಐದು ವರ್ಷದವನು…ವಿಶ್ರಾಂತಿ ಬೇಕು: ರಾಮಮಂದಿರ ಇನ್ಮುಂದೆ ಪ್ರತಿದಿನ 1 ಗಂಟೆ ಕ್ಲೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದು, ರಾಮಲಲಾ ನ ದರುಶನ ಪಡೆಯುತ್ತಿದ್ದಾರೆ.

ಇದೀಗ ಅಯೋಧ್ಯೆಯ ರಾಮಮಂದಿದಇನ್ನು ಮುಂದೆ ಪ್ರತಿದಿನ 1 ಗಂಟೆ ಮುಚ್ಚಿರಲಿದೆ. ಈ ವೇಳೆ ಭಕ್ತರಿಗೆ ಬಾಲರಾಮನ ದರುಶನಕ್ಕೆ ಅವಕಾಶವಿರುವುದಿಲ್ಲ ಎಂದು ಮಂದಿರದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ಬಾಲರಾಮ ಇನ್ನೂ ಐದು ವರ್ಷದವನು. ದೀರ್ಘ ಸಮಯದವರೆಗೆ ಎಚ್ಚರವಿರಲು ಸಾಧ್ಯವಿಲ್ಲ. ಬಾಲರಾಮನಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಪ್ರತಿದಿನ ಮಧ್ಯಾಹ್ನ 12.30 ರಿಂದ 1.30ರವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲು ಟ್ರಸ್ಟ್‌ ನಿರ್ಧರಿಸಿದೆ’ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಯಾದ ದಿನದಿಂದಲೇ (ಜ.22) ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಪಾರ ಪ್ರಮಾಣದಲ್ಲಿ ಭಕ್ತರು ಬರುತ್ತಿದ್ದ ಕಾರಣ ದರುಶನದ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ವಿಸ್ತರಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!