CINE | ವೇದಿಕೆ ಮೇಲೆ ನಟಿಯನ್ನು ಜೋರಾಗಿ ತಳ್ಳಿದ ಬಾಲಯ್ಯ, ಆದ್ರೂ ನಕ್ಕ ಆಡಿಯನ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿರಿಯ ನಟ ಬಾಲಯ್ಯ ಅವರು ಸಹನಟಿಯನ್ನು ವೇದಿಕೆಯಲ್ಲಿ ತಳ್ಳಿದ್ದು, ವಿಡಿಯೋ ವೈರಲ್‌ ಆಗುತ್ತಿದೆ.

ಬಾಲಯ್ಯ -ಅಂಜಲಿ ನಟನೆಯ ಗ್ಯಾಂಗ್ ಆಫ್ ಗೋದಾವರಿ ಚಿತ್ರದ ಈವೆಂಟ್​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ವಿಶ್ವಕ್ ಸೇನ್ ಹಾಗೂ ನೇಹಾ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಾರ್ಯಕ್ರಮದ ವೇದಿಕೆ ಜಾಗಕ್ಕಾಗಿ ಬಾಲಯ್ಯ ಪಕ್ಕಕ್ಕೆ ತಳ್ಳಿದ್ದಾರೆ. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ.

ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಬಾಲಯ್ಯ ತಳ್ಳಿದ್ದು, ಶಾಕ್‌ ಆದರೂ ಅಂಜಲಿ ಅದನ್ನು ತೋರಿಸಿಕೊಂಡಿಲ್ಲ. ಅವರು ನಕ್ಕಿದ್ದಕ್ಕೆ ಆಡಿಯನ್ಸ್‌ ಕೂಡ ನಕ್ಕು ಸುಮ್ಮನಾಗಿದ್ದಾರೆ.

ಆದರೆ ನೆಟ್ಟಿಗರು ಹೆಣ್ಣುಮಕ್ಕಳನ್ನು ರಫ್‌ ಆಗಿ ಹ್ಯಾಂಡಲ್‌ ಮಾಡಬಾರದು ಎನ್ನುವ ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!