ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಮೂರಿ ಬಾಲಕೃಷ್ಣ ಮತ್ತು ನಿರ್ದೇಶಕ ಬೋಯಪತಿ ಶ್ರೀನು ಸಂಯೋಜನೆಯ ಬಹುನಿರೀಕ್ಷಿತ ಸಿನಿಮಾ ‘ಅಖಂಡ 2’ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ನಡುವೆಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಯೋಜಿತ ದಿನಾಂಕಕ್ಕಿಂತ ಒಂದು ವಾರ ತಡವಾಗಿ ತೆರೆಗೆ ಬಂದರೂ, ಚಿತ್ರ ಆರಂಭದಲ್ಲೇ ಭರ್ಜರಿ ಓಪನಿಂಗ್ ಪಡೆದು ಸಿನಿ ವಲಯದ ಗಮನ ಸೆಳೆದಿತ್ತು.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿತ್ರಕ್ಕೆ ಅಸಾಧಾರಣ ಕ್ರೇಜ್ ಕಂಡುಬಂದಿದ್ದು, ಬಾಲಕೃಷ್ಣರ ಮಾಸ್ ಇಮೇಜ್ ಚಿತ್ರಕ್ಕೆ ದೊಡ್ಡ ಬೆಂಬಲವಾಗಿ ನಿಂತಿದೆ. ವಿಮರ್ಶಕರಿಂದ ಸ್ವಲ್ಪ ಮಟ್ಟಿನ ಟೀಕೆ ಎದುರಾದರೂ, ಅಭಿಮಾನಿಗಳು ತರ್ಕ–ಫಿಸಿಕ್ಸ್ ಎಲ್ಲವನ್ನೂ ಬದಿಗಿಟ್ಟು ಸಿನಿಮಾ ನೋಡುತ್ತಿದ್ದಾರೆ. ಮೊದಲ ವಾರಾಂತ್ಯದ ಕಲೆಕ್ಷನ್‌ಗಳು ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಬಂದಿದ್ದು, ಆರಂಭಿಕ ದಿನಗಳಲ್ಲಿ ಚಿತ್ರ ಭರ್ಜರಿ ವೇಗದಲ್ಲಿ ಸಾಗಿತ್ತು.
ಇದನ್ನೂ ಓದಿ:
ಆದರೆ ಮೊದಲ ವಾರದ ಬಳಿಕ ಬಾಯಿ ಮಾತಿನ ಪ್ರಚಾರ ನಿರೀಕ್ಷಿತ ಮಟ್ಟಕ್ಕೆ ಏರದ ಕಾರಣ ಸಂಗ್ರಹದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. 13 ದಿನಗಳ ಅಂತ್ಯದ ವೇಳೆಗೆ ‘ಅಖಂಡ 2’ ಸುಮಾರು 87 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಥಿಯೇಟ್ರಿಕಲ್ ವ್ಯವಹಾರ ಸುಮಾರು 101 ಕೋಟಿ ರೂಪಾಯಿಗೆ ತಲುಪಿದ್ದು, ಬ್ರೇಕ್‌ಈವನ್ ಸಾಧಿಸಲು ಇನ್ನೂ ಕೆಲವು ಕೋಟಿ ಗಳಿಕೆ ಅಗತ್ಯವಿದೆ.

