ಹೊಸದಿಗಂತ ವರದಿ ಶಿವಮೊಗ್ಗ:
ಬಲೆನೋ ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕುಂಚೇನಹಳ್ಳಿಯ ಕಲ್ಲಾಪುರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.
ದಾವಣಗೆರೆ ಮೂಲದ ಕಾರ್ತಿಕ್, ಮೋಹನ್ ಮತ್ತು ವಿವೇಕ್ ಮೃತಪಟ್ಟಿದ್ದಾರೆ. ರುದ್ರೇಶ್ ಎಂಬುವರಿಗೆ ಗಂಭೀರ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲಾ ವಿದ್ಯಾರ್ಥಿಗಳೆಂದು ಹೇಳಲಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.