ತೈಲ ಹಡಗಿನ ಮೇಲೆ ಹೌತಿ ಉಗ್ರರಿಂದ ಬ್ಯಾಲಿಸ್ಟಿನ್ ಕ್ಷಿಪಣಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೆಮೆನ್​ನಲ್ಲಿ ಹೌತಿ ಉಗ್ರರು ಮತ್ತೊಮ್ಮೆ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಆಪತ್ಬಾಂಧವನಂತೆ ಭಾರತೀಯ ನೌಕಾಪಡೆ ತುರ್ತು ರಕ್ಷಣೆ ಒದಗಿಸಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯೆಮೆನ್‌ನ ಮಾರ್ಷಲ್ ಐಲ್ಯಾಂಡ್ಸ್-ಫ್ಲಾಗ್ಡ್ ತೈಲ ಟ್ಯಾಂಕರ್ ಎಂವಿ ಮೆರ್ಲಿನ್ ಲುವಾಂಡಾ ಮೇಲೆ ಕ್ಷಿಪಣಿ ದಾಳಿ ನಡೆಸಿದರು. ಈ ಘಟನೆಯು MV ಮೆರ್ಲಿನ್ ಲುವಾಂಡಾದಲ್ಲಿ ಬೆಂಕಿಯನ್ನು ಉಂಟುಮಾಡಿತು ಮತ್ತು ತಕ್ಷಣವೇ ಭಾರತಕ್ಕೆ ರಕ್ಷಣಾ ವಿನಂತಿಯನ್ನು ಕಳುಹಿಸಲಾಯಿತು.

ತುರ್ತು ಕರೆಗೆ ಸ್ಪಂದಿಸಿದ ಐಎನ್ ಎಸ್ ವಿಶಾಖಪಟ್ಟಣಂ ನೆರವು ನೀಡಲು ಮುಂದೆ ಬಂದಿದೆ. ಅಮೆರಿಕ ಮತ್ತು ಫ್ರೆಂಚ್ ಯುದ್ಧನೌಕೆಗಳೂ ಭಾರತದೊಂದಿಗೆ ಬಂದಿದ್ದವು.

ವಿಶೇಷ ಅಗ್ನಿಶಾಮಕ ಉಪಕರಣಗಳನ್ನು ಹೊಂದಿದ ನೌಕಾಪಡೆಯ 10 ಸಿಬ್ಬಂದಿಗಳ ತಂಡವು ಆರು ಗಂಟೆಗಳ ಕಾಲ ಹರಸಾಹಸ ಪಟ್ಟು MV ಮೆರ್ಲಿನ್ ಲುವಾಂಡಾ ಎಂಬ ವ್ಯಾಪಾರಿ ಹಡಗನ್ನು ರಕ್ಷಿಸಿತು. ಟ್ಯಾಂಕರ್‌ನಲ್ಲಿ 22 ಭಾರತೀಯ ಸಿಬ್ಬಂದಿ ಮತ್ತು ಒಬ್ಬ ಬಾಂಗ್ಲಾದೇಶದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಮತ್ತು ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!