October 9, 2026
Friday, October 9, 2026
spot_img

ಗುರಮಠಕಲ್, ಯಾದಗಿರಿ ಬರ ಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಬಂದ್‌ಗೆ ಕರೆ: ಯಾದಗಿರಿ ಸ್ತಬ್ಧ

ಹೊಸದಿಗಂತ ವರದಿ ಯಾದಗಿರಿ:

ಗುರಮಠಕಲ್, ಯಾದಗಿರಿ ಬರ ಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಸರ್ವ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆಯಿಂದಲೇ ನಗರದಾದ್ಯಂತ ಎಲ್ಲ ಅಂಗಡಿ,ಮುಂಗಟ್ಟುಗಳ ಬಾಗಿಲು ತೆರೆಯಲಿಲ್ಲ. ಅಲ್ಲಲ್ಲಿ ಒಂದೊಂದು ಅಂಗಡಿಗಳು ತೆರೆದರೂ ಪ್ರತಿಭಟನಾಕಾರರು ಮಾಲೀಕರ ಮನವೊಲಿಸಿ ಅಂಗಡಿಗಳನ್ನು ಬಂದ್ ಮಾಡಿಸುವ ದೃಶ್ಯ ಕಂಡು ಬಂದಿತು.

ಸಾರಿಗೆ ಸಂಸ್ಥೆ ಬಸ್ ಗಳು ಸಹ ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.‌ಇತ್ತ ಖಾಸಗಿ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಒಟ್ಟಾರೆ ಅನ್ನದಾತರಿಗೆ ಜನಮನ ಸ್ಪಂದಿಸಿತ್ತು.

Must Read