ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಮಂಟಪದಲ್ಲಿ ಕೋಳಿ ಅಂಕ!?
ಅದೂ ಕೂಡಾ ಮದುಮಗ, ಮದುಮಗಳಿಂದ?
ಎಸ್, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಮದುವೆಯಲ್ಲಿ ಕಂಡುಬಂದ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಈ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಶಭಾಶ್‌ಗಿರಿಗೆ ಪಾತ್ರವಾಗಿದೆ.
ಇದಿಷ್ಟೇ ಅಲ್ಲ, ಈ ಮದುವೆಯಲ್ಲಿ ಇನ್ನೂ ಹಲವು ವಿಶಿಷ್ಟತೆಗಳಿದ್ದವು. ವಧೂವರರು ಇಲ್ಲಿ ಮದುವೆ ಹಾಲ್‌ಗೆ ಆಗಮಿಸಿದ್ದು ಜೆಸಿಬಿ ವಾಹನದಲ್ಲಿ! ಜೆಸಿಬಿಗೆ ಭರ್ಜರಿ ಹೂವಿನ ಸಿಂಗಾರ! ಜೆಸಿಬಿ ಬಕೆಟ್‌ನಲ್ಲಿ ವಿಶೇಷ ಸೋಫಾ…
ಇವೆಲ್ಲದವರ ಬಳಿಕ ಎಲ್ಲರ ಹುಬ್ಬೇರಿಸಿದ್ದು ಮಂಟಪದಲ್ಲಿಯೇ ನಡೆದ ‘ಕೋಳಿ ಕಟ್ಟ’ (ಸ್ಥಳೀಯ ಭಾಷೆ). ಅತಿಥಿವರೇಣ್ಯರ ಸಮ್ಮುಖದಲ್ಲಿ ಖುದ್ದು ಮದುಮಕ್ಕಳೇ ಕೋಳಿ ಅಂಕದ ಪ್ರಾತ್ಯಕ್ಷಿಕೆ ನೀಡಿ ಈಗ ಸುದ್ದಿ ಮಾಡಿದ್ದಾರೆ. ಈ ಮೂಲಕ ತಮ್ಮ ಮದುವೆಯ ಸಂಭ್ರಮವನ್ನು ಮಧುರ ನೆನಪುಗಳ ಬುತ್ತಿಯಾಗಿಸಿದ್ದಾರೆ.