ಹೊಸದಿಗಂತ ಡಿಜಿಟಲ್ ಡೆಸ್ಕ್ :
ಲಾಸ್ ಏಂಜಲೀಸ್ ನಲ್ಲಿ ನಡೆದ 65ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರದಲ್ಲಿ ಬೆಂಗಳೂರು ಮೂಲದ ಸಂಗೀತ ಸಂಯೋಜಕ ಮತ್ತು ನಿರ್ಮಾಪಕ ರಿಕ್ಕಿ ಕೇಜ್ ‘ಡಿವೈನ್ ಟೈಡ್ಸ್’ ಆಲ್ಬಂಗಾಗಿ ಪ್ರಶಸ್ತಿ ಗೆದ್ದಿದ್ದಾರೆ. ಮೂರನೇ ಭಾರಿಯೂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ವಿಶೇಷವಾದ ಸಂಗತಿ.
ಈ ಬಾರಿ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಹಾಗೂ ರಿಕ್ಕಿ ಕೇಜ್ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಮನಸೂರೆಗೊಳ್ಳುವ ಆಡಿಯೋ ಆಲ್ಬಂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಟ್ರೋಫಿಯನ್ನು ಗೆದ್ದ ನಂತರ ಕೇಜ್ ಟ್ವಿಟ್ಟರ್ ನಲ್ಲಿ “ನನ್ನ 3 ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ. @copelandmusic. ಹರ್ಬರ್ಟ್ ವಾಲ್ಟ್ಲ್ ಎರಿಕ್ ಸ್ಕಿಲ್ಲಿಂಗ್ ವೆನಿಲ್ ವೆಗಾಸ್ ಲೋನಿ ಪಾರ್ಕ್.” ಎಂದು ಟ್ವೀಟ್ ಮಾಡಿದ್ದಾರೆ.
ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ಭವ್ಯತೆಗೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಆಲ್ಬಂ ಒಂಬತ್ತು ಹಾಡುಗಳು ಮತ್ತು ಎಂಟು ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ. ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ.
ರಿಕಿ ಭಾರತದ ಅತ್ಯಂತ ಕಿರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿದ್ದಾರೆ ಮತ್ತು ಪ್ರಶಸ್ತಿ ಪಡೆದ ನಾಲ್ಕನೇ ಭಾರತೀಯರಾಗಿದ್ದಾರೆ. ಅಮೇರಿಕನ್ ಸಂಗೀತಗಾರ ಮತ್ತು ಸಂಯೋಜಕ ಸ್ಟೀವರ್ಟ್ ಕೋಪ್ಲ್ಯಾಂಡ್ ಕೂಡ ಐದು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುತ್ತಾರೆ . ಅವರು ವಿಶ್ವದಾದ್ಯಂತ 75 ಮಿಲಿಯನ್ ಆಲ್ಬಮ್ಗಳನ್ನು ಮಾರಾಟ ಮಾಡಿರುವ ಬ್ರಿಟಿಷ್ ರಾಕ್ ಬ್ಯಾಂಡ್ ‘ದಿ ಪೋಲಿಸ್’ ನ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.