ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಗೆ ಶಾಂತಿನಗರ ಸಿಸಿಬಿ ಕಚೇರಿ ಸಂಪೂರ್ಣ ಜಲಾವೃತಗೊಂಡಿದೆ.ಮಹಾಮಳೆಗೆ ರಾಜಕಾಲುವೆ ನೀರು ಒಳಗೆ ನುಗ್ಗಿದ್ದರಿಂದ ಗ್ರೌಂಡ್ ಫ್ಲೋರ್ ನಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿದೆ.
ದಾಖಲೆಗಳು ಹಾಳಾಗಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಈಗ ಚಿಂತೆ ಆರಂಭವಾಗಿದೆ. ಜೊತೆಗೆ ಕೊಳಚೆ ನೀರು ಕೆಟ್ಟ ವಾಸನೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಬೊಮ್ಮನಹಳ್ಳಿ ಮತ್ತು ಸಿಲ್ಕ್ ಬೋರ್ಡ್ ರಸ್ತೆ ಜಲಾವೃತಗೊಂಡಿದ್ದು ಮುಖ್ಯ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದೆ. ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಕಡೆ ಹೋಗುವ ರಸ್ತೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.