ಬೆಂಗಳೂರಿನಲ್ಲಿ 123 ವರ್ಷಗಳಲ್ಲಿ ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಒಣ ಹವೆ, 159 ದಿನಗಳ ನಂತರ ಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ 123 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಒಣಹವೆ ಉಂಟಾಗಿದೆ. ಆದರೆ, ಇದೀಗ 159 ದಿನಗಳ ಅಂತರದ ನಂತರ ಗುರುವಾರ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರಿನ ಕೆಲವು ಕಡೆ ಇಪ್ಪತ್ತು ನಿಮಿಷದಷ್ಟು ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ ಎನ್ ಪುವಿಯರಸನ್ ಪ್ರಕಾರ, 1901 ರಿಂದ 2024 ರವರೆಗೆ, ನಗರದಲ್ಲಿ ಏಪ್ರಿಲ್‌ನಲ್ಲಿ ಮಳೆಯಿಲ್ಲದಿರುವುದು ಇದೇ ಮೊದಲ ಬಾರಿಗೆ. ಗುರುವಾರ ಸಂಜೆ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿರುವ ವರದಿಯಾಗಿದೆ. ಆದರೆ ಐಎಂಡಿಯ ವೀಕ್ಷಣಾಲಯಗಳು ಯಾವುದೇ ಮಳೆಯನ್ನು ದಾಖಲಿಸಿಲ್ಲ ಎಂದಿದ್ದಾರೆ.

ಆದಾಗ್ಯೂ, ಮೋಡಗಳ ರಚನೆ ಮತ್ತು ಸಂಜೆಯ ಹವಾಮಾನ ಪರಿಸ್ಥಿತಿಗಳಲ್ಲಿನ ಹಠಾತ್ ಬದಲಾವಣೆಯು ಬೇಸಿಗೆಯಿಂದ ತಣಿದಿದ್ದ ಬೆಂಗಳೂರಿನ ನಿವಾಸಿಗಳಿಗೆ ಕೊಂಚ ಮಟ್ಟದ ರಿಲೀಫ್ ನೀಡಿದೆ. ಆದರೆ ಮಳೆ ಬಿಟ್ಟ ನಂತರ ಸೆಖೆ ಇನ್ನಷ್ಟು ಹೆಚ್ಚಾಗಿದೆ.

ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ನಗರದ ಕೆಲವೆಡೆ ಮಳೆಯಾಗಲಿದೆ. ಆದರೆ, ಐದು ದಿನಗಳ ನಂತರ ಗುಡುಗು ಸಹಿತ ಮಳೆಯಾಗಲಿದೆ. ಕ್ಲುಮಿನೊ-ನಿಂಬಸ್ ಮೋಡಗಳ ರಚನೆ ಮತ್ತು ಗುಡುಗು ಸಹಿತ ಮಳೆಯು ಸ್ಥಳೀಯ ಹವಾಮಾನ ಪರಿಸ್ಥಿತಿಯಿಂದಾಗಿ ಸಂಭವಿಸುತ್ತದೆ ಎಂದು ಪುವಿಯರಸನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!