February 21, 2026
Saturday, February 21, 2026
spot_img

ಹೆಣ್ಮಕ್ಕಳಿಗೆ ಕೆಲಸ ಮಾಡೋಕೆ ಬೆಂಗಳೂರೇ ಬೆಸ್ಟ್‌ ಅಂತೆ! 125 ನಗರಗಳನ್ನು ಹಿಂದಿಕ್ಕಿದ ಸಿಲಿಕಾನ್‌ ಸಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಿಳೆಯರಿಗೆ ಉದ್ಯೋಗ ಮಾಡಲು ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಉತ್ತಮ ಹವಾಮಾನದಿಂದ ದೇಶದ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿದ್ದ ಬೆಂಗಳೂರು ಇದೀಗ ಮಹಿಳಾ ಸ್ನೇಹಿ ಉದ್ಯೋಗದ ವಾತಾವರಣದಲ್ಲಿಯೂ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅವತಾರ್ ಗ್ರೂಪ್ ಎಂಬ ವರ್ಕ್​​ಪ್ಲೇಸ್ ಕಲ್ಚರ್ ಕನ್ಸಲ್ಟಿಂಗ್ ಫರ್ಮ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ವರದಿಯಲ್ಲಿ ಇದು ಕಂಡುಬಂದಿದೆ.

ಮಹಿಳೆಯರು ಕೆಲಸ ಮಾಡಲು ಹೆಚ್ಚು ಇಚ್ಛಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ್, ಕೊಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಹಾಗೂ ಕೊಯಮತ್ತೂರು ಕೂಡ ಸ್ಥಾನ ಪಡೆದಿವೆ. ದೇಶದಾದ್ಯಂತ 125 ನಗರಗಳನ್ನು ಅಧ್ಯಯನ ಮಾಡಿ, ಹಿಂದಿನ ವರ್ಷಗಳ ಮಾಹಿತಿಯೊಂದಿಗೆ ಹೋಲಿಕೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ನಗರಗಳಲ್ಲಿ ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ, ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧರಿಸಿ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ.

ಇದನ್ನೂ ಓದಿ: ಹೇಗಿದೆ ಗೊತ್ತಾ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ ಥಿಯೇಟರ್? ನೋಡಿದವರಿಗೆಲ್ಲಾ ಶಾಕ್!

ಸೋಷಿಯಲ್ ಇನ್​ಕ್ಲೂಶನ್ (ಸಾಮಾಜಿಕ ಒಳಗೊಳ್ಳುವಿಕೆ) ಅಂಕಗಳಲ್ಲಿ ನಗರಗಳ ವಾಸಯೋಗ್ಯತೆ, ಸುರಕ್ಷತೆ, ಮಹಿಳೆಯರ ಉದ್ಯೋಗ ಪ್ರತಿನಿಧಿತ್ವ ಮತ್ತು ಸಬಲೀಕರಣವನ್ನು ಪರಿಗಣಿಸಲಾಗಿದೆ. ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಮಹಿಳಾ ಸ್ನೇಹಿ ಉದ್ಯಮಗಳು, ವೃತ್ತಿ ಸಹಾಯಕ ವ್ಯವಸ್ಥೆಗಳು ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಂಸ್ಥೆಗಳ ಉಪಸ್ಥಿತಿಯನ್ನು ಗಮನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !