ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಜಲಾವೃತಗೊಂಡಿದೆ.
ಕಳೆದ ಮಾರ್ಚ್ ತಿಂಗಳಲ್ಲಿ 13.71 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದ್ದರು. ತಿಂಗಳು ಕಳೆಯುವುದರೊಳಗೆ ಮೆಟ್ರೋ ನಿಲ್ದಾಣ ಜಲಾವೃತವಾಗಿದೆ.
ಮಳೆ ನೀರಿನಿಂದ ಮುಳುಗಡೆಯಾದ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ದೃಶ್ಯಗಳನ್ನು ಹಲವಾರು ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಎಲ್ಲೆಡೆ ಟೀಕೆಗಳು ಕೇಳಿಬರುತ್ತಿವೆ.