January15, 2026
Thursday, January 15, 2026
spot_img

ಬೆಂಗಳೂರು ದರೋಡೆ ಕೇಸ್: ಆರೋಪಿಗಳಿಂದ 5.76 ಕೋಟಿ ಹಣ ಸೀಜ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹಾಡಹಗಲೇ 7.11 ಕೋಟಿ ಹಣ ದರೋಡೆ ಮಾಡಿದ ಪ್ರಕರಣವನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಪ್ರಕರಣದಲ್ಲಿ 5.76 ಕೋಟಿ ಹಣ ಸೀಜ್ ಮಾಡಲಾಗಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲು ಡಿಜೆ ಹಳ್ಳಿಯಲ್ಲಿ ಆಗಿದೆ ಅಂತ ಮಾಹಿತಿ ಬಂದಿತ್ತು. ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ. ಸಿಸಿಟಿವಿ ಕಾಣದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ತನಿಖೆಯ ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ. ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ಅನೇಕ ವಾಹನ ಬಳಸಿದ್ದಾರೆ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ಇಲ್ಲದ ಕಡೆಯಲ್ಲಿ ಆರೋಪಿಗಳು ಓಡಾಡಿದ್ದಾರೆ. ವಾಹನವನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಆರೋಪಿಗಳನ್ನು ಹುಡುಕಾಟ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕು. 200 ಸ್ಟಾಪ್ ಬಳಕೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಮೂವರು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಿಎಂಎಸ್ ಕಂಪನಿಯ ಲೋಪ ಕೂಡ ಇದೆ. ಸಿಎಂಎಸ್ ಕಂಪನಿಯು ರೂಲ್ಸ್ ವೈಲೇಷನ್ ಮಾಡಿದ್ದಾರೆ. ವೆಹಿಕಲ್ ಇನ್‌ಚಾರ್ಜ್ ಶಾಮೀಲಾಗಿ ಕೃತ್ಯ ಎಸಗಿದ್ದಾರೆ. ವಾಹನದ ಚಾಲಕ ಹೊರಗುತ್ತಿಗೆ ಡ್ರೈವರ್‌ ಆಗಿದ್ದ ಎಂದು ತಿಳಿಸಿದ್ದಾರೆ.

Most Read

error: Content is protected !!