ಬೆಂಗಳೂರು, ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದಲ್ಲಿ ಪ್ರಗತಿ: ವಾರ್ಷಿಕ ಆದಾಯ 80% ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದಲ್ಲಿ ಮಹತ್ತರ ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮದಲ್ಲಿ 80% ಹೆಚ್ಚಳವನ್ನು ಸೂಚಿಸುತ್ತಿದೆ. ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದ 20 ನೇ ವಾರ್ಷಿಕ ಭಾರತ ರೋಡ್‌ಶೋ ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಮುಕ್ತಾಯಗೊಂಡಿದೆ, ಈ ಒಂದು ಕ್ಷಣ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದಲ್ಲಿ ಎರಡು ದಶಕಗಳಿಂದ ಬೆಳೆಯುತ್ತಿರುವ ಹೂಡಿಕೆಗಳು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ತಂದುಕೊಡುತ್ತಿದೆ.

2023 ರಲ್ಲಿ ಭಾರತದಿಂದ ದಕ್ಷಿಣ ಆಫ್ರಿಕಾದ ಪ್ರಯಾಣದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. 43% ಹೆಚ್ಚಳದೊಂದಿಗೆ ಭಾರತವು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದ ಪ್ರಮುಖ ಮೂರು ಆದ್ಯತೆಯ ಮಾರುಕಟ್ಟೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. Ms. ನೆಲಿಸ್ವಾ ನ್ಕಾನಿ, ಹಬ್ ಹೆಡ್ – ಮಧ್ಯಪ್ರಾಚ್ಯ, ನೇತೃತ್ವದಲ್ಲಿ ಈ ಭಾರತ ರೋಡ್‌ಶೋ ಕೈಗೊಳ್ಳಲಾಗಿತ್ತು. ಸುಮಾರು 350 ಪ್ರವಾಸೋದ್ಯಮದ ಪಾಲುದಾರರು, ಸಹಯೋಗಿಗಳು, ಹಾಗೂ ಮಾರುಕಟ್ಟೆಯ ಷೇರುದಾರರು ಇದರಲ್ಲಿ ಪಾಲ್ಗೊಂಡಿದ್ದರು.

ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ನೆಲಿಸ್ವಾ ನ್ಕಾನಿ ಅವರು, ಭಾರತೀಯ ವ್ಯಾಪಾರ ಪಾಲುದಾರರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಭಾರತೀಯ ಪ್ರಯಾಣಿಕರಲ್ಲಿ 43% ಹೆಚ್ಚಳಕ್ಕೆ ಕೊಡುಗೆ ನೀಡುವಲ್ಲಿ ಅವರ ಪಾತ್ರ ಮುಖ್ಯವಾಗಿದೆ. 2024 ರ ಭಾರತೀಯ ಮಾರುಕಟ್ಟೆಯ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ಬೆಳವಣಿಗೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇನ್ನು ಹೆಚ್ಚಿನ ಭಾರತೀಯ ಪ್ರಯಾಣಿಕರನ್ನು ರೇನ್‌ಬೋ ನೇಷನ್‌ಗೆ ನಾವು ಸ್ವಾಗತಿಸುತ್ತೇವೆ ಎಂದು ಈ ಮೂಲಕ ತಿಳಿಸಿದರು.

ಈ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರ ಎಷ್ಟು ಮುಖ್ಯವಾಗಿದೆ ಎಂದು ಅದರ ಆದಾಯದಲ್ಲಿ ಕಾಣಸಿಗುತ್ತದೆ. ನಗರದಿಂದ 53% ಜನರು ವ್ಯಾಪಾರ ಉದ್ದೇಶಗಳಿಗಾಗಿ ದಕ್ಷಿಣ ಆಫ್ರಿಕಾವನ್ನು ಅನ್ವೇಷಿಸುತ್ತಿದ್ದಾರೆ. ಈ ಬಾಂಧವ್ಯವನ್ನು ಉಳಿಸಿಕೊಳ್ಳಲು, ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮವು ಎರಡು ರಾಷ್ಟ್ರಗಳ ನಡುವೆ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಪ್ರವೇಶವನ್ನು ಹೆಚ್ಚಿಸಲು ಯೋಚಿಸಿದೆ ಎಂದು ಹೇಳಿದರು.

ಭಾರತೀಯ ಪ್ರಭಾವಿಗಳನ್ನು ಒಳಗೊಂಡ ಪ್ರವಾಸೋದ್ಯಮ ಮಂಡಳಿಯ ಇನ್ನಷ್ಟು ಬ್ರ್ಯಾಂಡ್ ಪ್ರಚಾರವು ಹೊಸ ಪ್ರಾಂತ್ಯಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಮುಂಬರುವ ಭಾರತೀಯ ಕಾರ್ಪೊರೇಟ್‌ಗಳೊಂದಿಗೆ ತೊಡಗಿಸಿಕೊಳ್ಳುಲಿದೆ ಎನ್ನಲಾಗಿದೆ, ವ್ಯಾಪಾರ ಮತ್ತು MICE ಪ್ರಯಾಣ ಅಗತ್ಯಗಳನ್ನು ನೀಡುವ ಮೂಲಕ, ಎಮಿರೇಟ್ಸ್, ಕತಾರ್ ಏರ್‌ವೇಸ್, ಇಥಿಯೋಪಿಯನ್ ಏರ್‌ಲೈನ್ಸ್, ಕೀನ್ಯಾ ಏರ್‌ವೇಸ್ ಮತ್ತು ಏರ್ ಸೀಶೆಲ್ಸ್ ಸೇರಿದಂತೆ ಭಾರತವನ್ನು ದಕ್ಷಿಣ ಆಫ್ರಿಕಾಕ್ಕೆ ಸಂಪರ್ಕಿಸುವ ವಿವಿಧ ಸ್ಟಾಪ್-ಓವರ್ ವಿಮಾನಗಳೊಂದಿಗೆ, ಎರಡು ರಾಷ್ಟ್ರಗಳ ನಡುವಿನ ಪ್ರವಾಸೋದ್ಯಮದಲ್ಲಿ ಒಳ್ಳೆಯ ಬಾಂಧವ್ಯವನ್ನು ಬೆಳೆಸಲು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!