ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಸಿಂಗಾಪುರ್ ಏರ್‌ಲೈನ್ಸ್ ವಿಮಾನವು ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಿಂಗಾಪುರ ಏರ್‌ಲೈನ್ಸ್ ಬೋಯಿಂಗ್ ವಿಮಾನವು ಮೇ 20 ರಂದು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿತ್ತು.
“ಸಿಂಗಪೂರ್ ಏರ್ಲೈನ್ಸ್ ಫ್ಲೈಟ್ SQ321, ಲಂಡನ್ (ಹೀಥ್ರೂ) ನಿಂದ ಸಿಂಗಾಪುರಕ್ಕೆ 20 ಮೇ 2024 ರಂದು ಹೊರಟ್ಟಿತ್ತು, ಮಾರ್ಗದಲ್ಲಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿದ ಕಾರಣ. ವಿಮಾನವು ಬ್ಯಾಂಕಾಕ್‌ಗೆ ತಿರುಗಿತು ಮತ್ತು 21 ಮೇ 2024 ರಂದು ಸ್ಥಳೀಯ ಸಮಯ 15:45 ಗಂಟೆಗೆ ತುರ್ತು ಭೂಸ್ಪರ್ಶವಾಗಿದೆ” ಎಂದು ಸಿಂಗಾಪುರ್ ಏರ್‌ಲೈನ್ಸ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.
ವಿಮಾನದಲ್ಲದ್ದ ಹಲವರಿಗೆ ಗಾಯಗಳಾಗಿವೆ ಎಂದು ಏರ್‌ಲೈನ್ ದೃಢಪಡಿಸಿದೆ ಮತ್ತು ವಿಮಾನದಲ್ಲಿರುವ ಪ್ರಯಾಣಿಕರಿಗೆ ಎಲ್ಲಾ ಸಂಭವನೀಯ ನೆರವು ನೀಡಲಾಗುವುದು, ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದೆ.