ಹೊಸದಿಗಂತ ಡಿಜಿಟಲ್‌ಡೆಸ್ಕ್:
ಕಿವೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ (Mushfiqur Rahim) ಮಾಡಿದಎಡವಟ್ಟಿನಿಂದ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಬಾಂಗ್ಲಾದೇಶ (Bangladesh) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 83 ಎಸೆತಗಳಲ್ಲಿ 35 ರನ್ ಗಳಿಸಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅಪರೂಪದ ಔಟ್‌ಗೆ ತುತ್ತಾಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡುತ್ತಿದೆ.
ಕಿವೀಸ್ ಬೌಲರ್ ಕೈಲ್ ಜೇಮಿಸನ್ (Kyle Jamieson) 41ನೇ ಓವರ್‌ನ 4ನೇ ಎಸೆತ ಬೌಲಿಂಗ್ ಮಾಡಿದಾಗ ಮುಶ್ಫಿಕರ್ ಅದನ್ನು ಬ್ಯಾಟ್‌ನಿಂದ ರಕ್ಷಣೆ ಮಾಡಿದರು. ತಕ್ಷಣವೇ ಸ್ಟಂಪ್ಸ್‌ನತ್ತ ಹೋಗುತ್ತಿದ್ದ ವೇಳೆ ಚೆಂಡನ್ನು ತಮ್ಮ ಬಲಗೈನಿಂದ ತಳ್ಳಿದರು. ಇದರಿಂದ ಕಿವೀಸ್ ಪಡೆ 3ನೇ ಅಂಪೈರ್‌ಗೆ ಮನವಿ ಮಾಡಿತು. ಟಿವಿ ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು.
Mushfiqur Rahim out for obstructing the field.
– He is the first Bangladesh batter to dismiss by this way in cricket history.pic.twitter.com/MfZONDzswk
— Johns. (@CricCrazyJohns) December 6, 2023
ಕ್ರಿಕೆಟ್ ನಿಯಮ ಏನು ಹೇಳುತ್ತೆ?
ಅಂತಾರಾಷ್ಟ್ರೀಯ ಕ್ರಿಕೆಟ್ ಬೌಲಿಂಗ್ ನಿಯಮಗಳ ಪ್ರಕಾರ, ʻಹ್ಯಾಂಡ್ಲಿಂಗ್ ದಿ ಬಾಲ್ʼಮಾಡುವುದು (ಕೈಗಳಿಂದ ಬಾಲ್ ತಳ್ಳುವುದು) ನಿಯಮ ಉಲ್ಲಂಘನೆಯ ಕ್ರಮವಾಗಿದೆ. ಅಂದರೆ ಪಂದ್ಯ ನಡೆಯುವ ವೇಳೆ ಫೀಲ್ಡರ್ ಒಪ್ಪಿಗೆಯಿಲ್ಲದೇ ಬ್ಯಾಟರ್‌ಗಳು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ರಹಿತವಾಗಿ ಕೈಯಿಂದ ಚೆಂಡನ್ನು ಮುಟ್ಟಿದರೆ ಅದು ನಿಯಮ ಉಲ್ಲಂಘನೆಯಾಗುತ್ತದೆ. ಇದರಿಂದ ಅಂಪೈರ್ ಔಟ್ ತೀರ್ಪು ನೀಡಬಹುದು. ಆದ್ರೆ ಈ ನಿಯಮದಿಂದ ಔಟ್ ಮಾಡಿದ ವಿಕೆಟ್ ಬೌಲರ್ ಖಾತೆಗೆ ಸೇರುವುದಿಲ್ಲ. ಒಂದು ವೇಳೆ ಬಾಲ್ ಬ್ಯಾಟ್ಸ್‌ಮನ್‌ಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿದ್ದರೆ, ಅಂತಹ ಸಂದರ್ಭದಲ್ಲಿ ತನ್ನ ಕೈಗಳಿಂದ ಚೆಂಡನ್ನು ತಡೆಯಬಹುದು ಎಂದು ಕ್ರಿಕೆಟ್ ನಿಯಮ ಹೇಳುತ್ತದೆ.
ಹ್ಯಾಂಡ್ಲಿಂಗ್ ದಿ ಬಾಲ್ʼಮೂಲಕ ಔಟಾಗಿರುವುದು ಇದೇ ಮೊದಲೇನಲ್ಲ 1979ರಲ್ಲಿ ಮೊಟ್ಟ ಮೊದಲಬಾರಿಗೆ ಆಸೀಸ್ ಕ್ರಿಕೆಟಿಗ ಆಂಡ್ರ್ಯೂ ಹಿಲ್ಡಿಚ್ ಪರ್ತ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಆಡುವಾಗ ಔಟಾಗಿದ್ದರು. ಆ ನಂತರ 1986ರಲ್ಲಿ ಟೀಂ ಇಂಡಿಯಾದ ಮೊಹಿಂದರ್ ಅಮರನಾಥ್ ಆಸೀಸ್ ವಿರುದ್ಧ, 1993ರಲ್ಲಿ ಇಂಗ್ಲೆಂಡ್‌ನ ಗ್ರಹಾಂ ಗೂಚ್ ಆಸೀಸ್ ವಿರುದ್ಧ, 2001ರಲ್ಲಿ ಆಸೀಸ್ ತಂಡದ ಸ್ಟೀವ್ ವಾ ಭಾರತದ ವಿರುದ್ಧ ಹಾಗೂ 2014ರಲ್ಲಿ ಭಾರತದ ಚೇತೇಶ್ವರ್ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಆಡುವಾಗ ಔಟಾದ ಉದಾಹರಣೆಗಳು ಇವೆ. ಇದರೊಂದಿಗೆ ರಸೆಲ್ ಎಂಡಿಯನ್, ಮೊಹ್ಸಿನ್ ಖಾನ್, ಡೆಸ್ಮಂಡ್ ಹೇನ್ಸ್, ಡೇರಿಲ್ ಕಲಿನನ್, ಮೈಕೆಲ್ ವಾಘನ್, ಚಾಮು ಚಿಭಾಭಾ ಔಟಾಗಿದ್ದಾರೆ.