February 12, 2026
Thursday, February 12, 2026
spot_img

Bangla Election | ವಿಶ್ವದ ಮೊದಲ ‘Gen-Z’ ಎಲೆಕ್ಷನ್: ಢಾಕಾದ ಗದ್ದುಗೆ ಏರುವವರು ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರ ಐತಿಹಾಸಿಕ ಯುವ ಕ್ರಾಂತಿಯ ನಂತರ, ಬಾಂಗ್ಲಾದೇಶವು ಇಂದು ತನ್ನ ನವಯುಗದ ಮೊದಲ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ. ಶೇಖ್ ಹಸೀನಾ ಅವರ 15 ವರ್ಷಗಳ ಸುದೀರ್ಘ ಆಡಳಿತ ಪತನಗೊಂಡ ಬಳಿಕ ನಡೆಯುತ್ತಿರುವ ಈ ಚುನಾವಣೆಯನ್ನು ವಿಶ್ವದ ಮೊದಲ ‘ಜೆನ್-ಝಿ’ (Gen Z) ಚುನಾವಣೆ ಎಂದು ಬಣ್ಣಿಸಲಾಗಿದೆ.

ಇಂದು ಬೆಳಗ್ಗೆ 7:30ಕ್ಕೆ ಆರಂಭವಾಗಿರುವ ಮತದಾನ ಸಂಜೆ 4:30ರವರೆಗೆ ನಡೆಯಲಿದೆ.

ಈ ಬಾರಿ ಕೇವಲ ಸಂಸದರ ಆಯ್ಕೆಯಷ್ಟೇ ಅಲ್ಲದೆ, ದೇಶದ ಸಂವಿಧಾನದಲ್ಲಿ ಆಮೂಲಾಗ್ರ ಬದಲಾವಣೆ ತರಲು ಉದ್ದೇಶಿಸಿರುವ 84 ಅಂಶಗಳ ಸುಧಾರಣಾ ಪ್ಯಾಕೇಜ್‌ ಮೇಲೆಯೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟು 299 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 50ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ 1,755 ಅಭ್ಯರ್ಥಿಗಳು ಮತ್ತು 273 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಜಮಾತ್-ಎ-ಇಸ್ಲಾಮಿ ಅಭ್ಯರ್ಥಿಯ ನಿಧನದಿಂದಾಗಿ ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ).

ಸುಮಾರು 12.7 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ನಿರೀಕ್ಷೆಯಿದೆ. ಈ ಪೈಕಿ ಬಹುಪಾಲು ಯುವ ಮತದಾರರೇ ದೇಶದ ಹಣೆಬರಹ ನಿರ್ಧರಿಸಲಿದ್ದಾರೆ.

ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವ ಹಿನ್ನೆಲೆಯಲ್ಲಿ, ಈ ಚುನಾವಣೆಯ ಫಲಿತಾಂಶವು ದಕ್ಷಿಣ ಏಷ್ಯಾದ ರಾಜಕೀಯ ಸಮೀಕರಣಗಳನ್ನು ಬದಲಿಸುವ ಸಾಧ್ಯತೆಯಿದೆ. ಭಾರತ ಮತ್ತು ಚೀನಾ ಈ ಬೆಳವಣಿಗೆಯನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಿವೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಬಾಂಗ್ಲಾದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲಿದೆ ಎಂಬುದು ನಾಳೆ ಹೊರಬೀಳುವ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !