ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಆಟಗಾರರು ಲೈವ್ ಪಂದ್ಯದಲ್ಲೇ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಕ್ರೀಸ್‌ನಲ್ಲಿದ್ದ ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ನಡುವೆ ಸ್ಲೆಡ್ಜಿಂಗ್ ತಾರಕಕ್ಕೇರಿ ಹೊಡೆದಾಟವೇ ನಡೆದು ಹೋಗಿದೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎಮರ್ಜಿಂಗ್ ಟೀಂ ಅಭ್ಯಾಸ ಪಂದ್ಯ ಆಡಿತ್ತು. ನಾಲ್ಕು ದಿನಗಳ ಈ ಪಂದ್ಯದಲ್ಲಿ ಬಾಂಗ್ಲಾದೇಶ ಎಮರ್ಜಿಂಗ್ ಟೀಂ ಹಾಗೂ ಸೌತ್ ಆಫ್ರಿಕಾ ಎಮರ್ಜಿಂಗ್ ಟೀಂ ಮುಖಾಮುಖಿಯಾಗಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಬಾಂಗ್ಲಾದೇಶ ಬ್ಯಾಟರ್ ರಿಪ್ಪೊನ್ ಮೊಂಡಾಲ್ ಹಾಗೂ ಸೌತ್ ಆಫ್ರಿಕಾದ ವೇಗಿ ಶೆಪೋ ಎನ್‌ಟುಲಿ ನಡುವೆ ಸ್ಲೆಡ್ಜಿಂಗ್ ಆರಂಭಗೊಂಡಿತ್ತು. ಪ್ರತಿ ಎಸೆತದ ಬಳಿಕ ಎನ್‌ಟುಲಿ ಸ್ಲೆಡ್ಜಿಂಗ್ ಮಾಡಿದರೆ, ಇತ್ರ ಮೊಂಡಾಲ್ ಕೂಡ ತಿರುಗೇಟು ನೀಡಿದ್ದಾರೆ.
ವೇಗವಾಗಿ ಓಡಿ ಬಂದು ಹಾಕಿದ ಎಸೆತವನ್ನು ಅಷ್ಟೇ ವೇಗದಲ್ಲಿ ಸಿಕ್ಸರ್ ಸಿಡಿಸಿದ ಮೊಂಡಾಲ್ ವೇಗಿಗೆ ತಿರುಗೇಟು ನೀಡಿದ್ದಾನೆ, ಸಿಕ್ಸರ್ ಜೊತೆಗೆ ಸ್ಲೆಡ್ಜಿಂಗ್ ಮೂಲಕವೂ ತಿರುಗೇಟು ನೀಡಿದ ಕಾರಣ, ವೇಗಿ ಆಕ್ರೋಶ ಹೆಚ್ಚಾಗಿದೆ.ರಿಪ್ಪೊನ್ ಮೊಂಡಾಲ್ ಬಳಿ ತೆರಳಿ ದೂಡಿದ್ದಾರೆ. ತಳ್ಳಾಟ, ನೂಕಾಟ ನಡೆದಿದೆ, ರಿಪ್ಪೊನ್ ಮೊಂಡಾಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದೇ ವೇಳೆ ಇತರ ಆಟಗಾರರು ಸೇರಿಕೊಂಡಿದ್ದಾರೆ.
ಇತ್ತ ಅಂಪೈರ್ ಇಬ್ಬರು ಆಟಗಾರರ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು. ಕೊನೆಗೂ ಅಂಪೈರ್ ಮಧ್ಯಪ್ರವೇಶದಿಂದ ಜಗಳ ನಿಂತಿದೆ.ಇತ್ತ ಭದ್ರತಾ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿದ್ದಾರೆ.